ಮ್ಯಾಂಚೆಸ್ಟರ್(ಜೂ.16): ವಿಶ್ವಕಪ್ ಟೂರ್ನಿಯಲ್ಲಿಂದು ಬಿಗ್ ಫೈಟ್. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇಡೀ ವಿಶ್ವವೇ ಕಾದುಕುಳಿತಿದೆ.  ಟಾಸ್ ಗೆದ್ದಿರುವ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಇಂಜುರಿಯಾಗಿರುವ ಶಿಖರ್ ಧವನ್ ಬದಲು ವಿಜಯ್ ಶಂಕರ್‌ಗೆ ಸ್ಥಾನ ನೀಡಲಾಗಿದೆ. 

 

ಪಾಕ್ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಸತತ ಗೆಲುವಿನ ಇತಿಹಾಸ ಹೊಂದಿರು ಟೀಂ ಇಂಡಿಯಾ ಇದೀಗ ಮತ್ತೊಂದು ಗೆಲುವನ್ನು ಎದುರುನೋಡುತ್ತಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ 3 ಪಂದ್ಯದಲ್ಲಿ 2 ಗೆಲುವು ಹಾಗೂ ಒಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 5 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇತ್ತ ಪಾಕಿಸ್ತಾನ 4 ರಲ್ಲಿ ಗೆಲುವು 2 ಗೆಲುವು ಹಾಗೂ ಒಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 3 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.