ಟೌಂಟನ್(ಜೂ.12): ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಿಗೆ ಮಳೆ ಕಾಟ ಜೋರಾಗಿದೆ. ಇದೀಗ 17ನೇ ಲೀಗ್ ಪಂದ್ಯ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆ ಭೀತಿ ನಡುವೆಯೂ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ  ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

 

ಆಸ್ಟ್ರೇಲಿಯಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಕೇನ್ ರಿಚರ್ಡನ್ಸ್ ಹಾಗೂ ಶಾನ್ ಮಾರ್ಶ್ ತಂಡ ಸೇರಿಕೊಂಡಿದ್ದಾರೆ. ಇತ್ತ ಪಾಕಿಸ್ತಾನ ಕೂಡ ಒಂದು ಬದಲಾವಣೆ ಮಾಡಿದೆ. ಶಾಹೀನ್ ಅಫ್ರಿದಿ ತಂಡ ಸೇರಿಕೊಂಡಿದ್ದಾರೆ.