ಲಾರ್ಡ್ಸ್(ಜೂ.23): ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ  ಪಾಕಿಸ್ತಾನ ಬ್ಯಾಟಿಂಗ್ಆಯ್ಕೆ ಮಾಡಿಕೊಂಡಿದೆ. ಪಾಕಿಸ್ತಾನ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಹ್ಯಾರಿಸ್ ಸೊಹೈಲ್ ಹಾಗೂ ಶಹೀನ್ ಆಫ್ರಿದಿ ತಂಡ ಸೇರಿಕೊಂಡಿದ್ದಾರೆ. 

ಅಂಕಪಟ್ಟಿಯಲ್ಲಿ ಸೌತ್ ಆಫ್ರಿಕಾ 8ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 9ನೇ ಸ್ಥಾನದಲ್ಲಿದೆ.  ಹೀಗಾಗಿ ಉಭಯ ತಂಡಗಳ ಸೆಮಿಫೈನಲ್ ಹೋರಾಟ ಬಹುತೇಕ ಅಂತ್ಯವಾಗಿದೆ. ಇನ್ನೇನಿದ್ದರೂ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಬೇಕಿದೆ. ಉಭಯ ತಂಡಗಳು ಉಳಿದೆಲ್ಲಾ ಪಂದ್ಯ ಗೆದ್ದು, ಟಾಪ್ 4ರಲ್ಲಿರುವ ತಂಡಗಳು ಪಂದ್ಯಗಳನ್ನು ಸೋಲುತ್ತಾ ಬಂದರೆ ಸೆಮಿಫೈನಲ್ ಹಂತಕ್ಕೇರೋ ಸಣ್ಣ ಅವಕಾಶವಿದೆ.