ಬರ್ಮಿಂಗ್ ಹ್ಯಾಮ್[ಜೂ.26]: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಟೂರ್ನಿಯ 33ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. 

ಇಂದಿನ ಟಾಸ್ ಪ್ರಕ್ರಿಯೆ ಮಳೆಯ ಕಾರಣದಿಂದ ತಡವಾಗಿ ನಡೆಯಿತು. ಒಂದು ವೇಳೆ ಮಳೆಯಿಂದಾಗಿ ಇಂದಿನ ಪಂದ್ಯ ರದ್ದಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡರೂ ಪಾಕ್ ಸೆಮೀಸ್ ಪ್ರವೇಶದ ಕನಸು ಜೀವಂತವಾಗಿರಲಿದೆ. ಮುಂದಿನ ಎರಡು ಪಂದ್ಯಗಳು ಗೆದ್ದರೆ ಪಾಕ್ ನಾಲ್ಕರಘಟ್ಟ ಪ್ರವೇಶಿಸುವ ಸಾಧ್ಯತೆಯಿದೆ. 

ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಾಕಿಸ್ತಾನ ಇದೀಗ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ನ್ಯೂಜಿಲೆಂಡ್ ಮಣಿಸಲು ಸಜ್ಜಾಗಿದೆ. ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಪಾಕ್ ಪಾಲಿಗೆ ಮಹತ್ವದ ಪಂದ್ಯ ಇದಾಗಿದ್ದು, ಒಂದುವೇಳೆ ಮುಗ್ಗರಿಸಿದರೆ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವುದು ಮರೀಚಿಕೆಯಾಗಲಿದೆ. ಇನ್ನು ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದ ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧದ ಪಂದ್ಯ ಮಳೆಯಿಂದಾಗಿ ಒಂದು ಎಸೆತವೂ ಕಾಣದೇ ರದ್ದಾಗಿತ್ತು. ಒಟ್ಟು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ತಂಡ ಇದೀಗ ಪಾಕ್ ಬಗ್ಗುಬಡಿದು ಮತ್ತೆ ಅಗ್ರಸ್ಥಾನಕ್ಕೇರುವುದರ ಜತೆಗೆ ಸೆಮಿಫೈನಲ್ ಟಿಕೆಟ್ ಖಚಿತ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.

ತಂಡಗಳು ಹೀಗಿವೆ:

ಪಾಕಿಸ್ತಾನ

ನ್ಯೂಜಿಲೆಂಡ್: