ಬರ್ಮಿಂಗ್‌ಹ್ಯಾಮ್(ಜೂ.19): ವಿಶ್ವಕಪ್ ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್  ಹಾಗೂ ಸೌತ್ ಆಫ್ರಿಕಾ ತಂಡ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ  ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮೈದಾನ ಒದ್ದೆಯಾದ ಕಾರಣ ಟಾಸ್ ವಿಳಂಬವಾಗಿತ್ತು. ಹೀಗಾಗಿ ಓವರ್ ಕಡಿತಗೊಳಿಸಲಾಗಿದೆ.   49 ಪಂದ್ಯ ನಡೆಯಲಿದೆ. 

ನ್ಯೂಜಿಲೆಂಡ್ 4 ಪಂದ್ಯದಲ್ಲಿ 3 ಗೆಲುವು ಕಂಡಿದೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿರುವ ನ್ಯೂಜಿಲೆಂಡ್ ಇದೀಗ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಸೌತ್ ಆಫ್ರಿಕಾ 5ರಲ್ಲಿ 1 ಗೆಲುವು ಹಾಗೂ 3 ಸೋಲು ಕಂಡಿರುವ ಸೌತ್ ಆಫ್ರಿಕಾ 3 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.