ಸೌಥಾಂಪ್ಟನ್(ಜೂ.22): ಅಫ್ಘಾನಿಸ್ತಾನ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ 11 ರನ್ ರೋಚಕ  ಗೆಲುವು ಸಾಧಿಸಿದೆ. ಬೌಲರ್‌ಗಳ ಪರಾಕ್ರಮದಿಂದ  ಟೀಂ ಇಂಡಿಯಾ ಭಾರಿ ಮುಖಭಂಗದಿಂದ ಪಾರಾಗಿದೆ. ಅಂತಿಮ ಓವರ್‌ನಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಅಫ್ಘಾನ್ ತಂಡವನ್ನು ಆಲೌಟ್ ಮಾಡಿದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಶಮಿ  ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದರು.

ಇದನ್ನೂ ಓದಿ: ಅಫ್ಘಾನ್ ವಿರುದ್ಧ ಬ್ಯಾಟ್ಸ್‌ಮನ್ ಪರದಾಟ, ಬೌಲರ್ಸ್ ಆರ್ಭಟ- ತಿಣುಕಾಡಿ ಗೆದ್ದ ಭಾರತ!

32 ವರ್ಷಗಳ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬೌಲರ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. 1987ರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಚೇತನ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೂ ಚೇತನ್ ಶರ್ಮಾ ಪಾತ್ರರಾಗಿದ್ದಾರೆ. ಬಳಿಕ ಟೀಂ ಇಂಡಿಯಾದ ಯಾವ ಬೌಲರ್ ಕೂಡ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರಲಿಲ್ಲ.

ಇದನ್ನೂ ಓದಿ: ಅಫ್ಘಾನ್ ವಿರುದ್ಧ ಧೋನಿ ಸ್ಲೋ ಬ್ಯಾಟಿಂಗ್-ಫುಲ್ ಟ್ರೋಲ್!

2019ರ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ  10ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಇಷ್ಟೇ ಅಲ್ಲ 2019ರ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎಂಹ ಹಿರಿಮೆಗೆ ಪಾತ್ರರಾಗಿದ್ದಾರೆ. 

ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್
ಚೇತನ್ ಶರ್ಮಾ, 1987
ಸಕ್ಲೈನ್ ಮುಷ್ತಾರ್, 1987
ಚಮಿಂಡ ವಾಸ್, 2003
ಬ್ರೆಟ್ ಲೀ, 2003
ಲಸಿತ್ ಮಲಿಂಗ್, 2007( ಸತತ 4 ವಿಕೆಟ್)
ಕೇಮರ್ ರೋಚ್, 2011
ಲಸಿತ್ ಮಲಿಂಗ,  2011
ಸ್ಟೀವನ್ ಫಿನ್, 2015
ಜೆಪಿ ಡುಮಿನಿ, 2015
ಮೊಹಮ್ಮದ್  ಶಮಿ, 2019