ಸೌಥಾಂಪ್ಟನ್(ಜೂ.25): ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಸೆಮಿಫೈನಲ್ ಪ್ರವೇಶಿಸೋ ವಿಶ್ವಾಸದಲ್ಲಿದೆ. ಆಫ್ಘಾನಿಸ್ತಾನ ವಿರುದ್ದದ ಗೆಲುವಿನ ಬಳಿಕ ಇದೀಗ ಭಾರತ ವಿರುದ್ಧದ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಜುಲೈ 2 ರಂದು ಬಾಂಗ್ಲಾದೇಶ, ಭಾರತ ವಿರುದ್ಧ ಹೋರಾಟ ನಡೆಸಲಿದೆ. 7 ದಿನಗಳ ವಿಶ್ರಾಂತಿ ಪಡೆದಿರುವ ಬಾಂಗ್ಲಾದೇಶಕ್ಕೆ ಇದೀಗ ಇಂಜುರಿ ಆಘಾತ ಎದುರಾಗಿದೆ.

ಇದನ್ನೂ ಓದಿ: ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾಗೆ ಎದೆನೋವು- ಮುಂಬೈ ಆಸ್ಪತ್ರೆ ದಾಖಲು!

ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಮಿಡ್ಲ ಆರ್ಡರ್ ಬ್ಯಾಟ್ಸ್‌ಮನ್ ಮೊಹಮ್ಮುದಲ್ಲಾ ಮಾಂಸಖಂಡದ ಗಾಯಕ್ಕೆ ತುತ್ತಾಗಿದ್ದಾರೆ. ಬಲಗಾಲಿನ ಮಾಂಸಖಂಡದ ಗಾಯಕ್ಕೆ ತುತ್ತಾಗಿರುವ ಮೊಹಮ್ಮದುಲ್ಲಾಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಇದು ಬಾಂಗ್ಲಾ ತಂಡದ ಚಿಂತೆ ಹೆಚ್ಚಿಸಿದೆ.  

ಇದನ್ನೂ ಓದಿ: ಕೊಹ್ಲಿ ಬಳಗಕ್ಕೆ ಒಪ್ಪೊ, ಆಫ್ಘನ್ ತಂಡಕ್ಕೆ ಅಮುಲ್: ಇದು ಲಾಭದ ಕಮಾಲ್!

ಅಫ್ಘನ್ ವಿರುದ್ದ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಇಂಜುರಿ ಸಮಸ್ಯೆ ಎದುರಿಸಿದ ಮೊಹಮ್ಮದುಲ್ಲಾಗೆ ಫಿಸಿಯೋ ಚಿಕಿತ್ಸೆ ನೀಡಿದ್ದರು. ಬಳಿಕ ನೋವಿನಲ್ಲೇ ಬ್ಯಾಟಿಂಗ್ ಮುಂದುವರಿಸಿದರು. ನೋವು ಹೆಚ್ಚಾದ ಕಾರಣ ಫೀಲ್ಡಿಂಗ್ ಮಾಡಲು ಮೊಹಮ್ಮದುಲ್ಲಾ ಕಣಕ್ಕಿಳಿಯಲಿಲ್ಲ. ಭಾರತ ವಿರುದ್ದದ ಪಂದ್ಯಕ್ಕೆ ಇನ್ನು 7 ದಿನ ಬಾಕಿ ಇದೆ. ಈ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಬಾಂಗ್ಲಾದೇಶ ಫಿಸಿಯೋ ಹೇಳಿದ್ದಾರೆ.