ಬರ್ಮಿಂಗ್ ಹ್ಯಾಮ್[ಜೂ.30]: ಭಾರತ-ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಮಹತ್ವದ ಪಂದ್ಯದಲ್ಲಿ ವಿಜಯ್ ಶಂಕರ್ ಅವರನ್ನು ಕೈಬಿಟ್ಟು ರಿಷಭ್ ಪಂತ್ ಗೆ ಅವಕಾಶ ನೀಡಲಾಗಿದೆ.

ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದ ವಿಜಯ್ ಶಂಕರ್[58 ರನ್, 2ವಿಕೆಟ್] ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಇತ್ತೀಚೆಗಷ್ಟೇ ತಂಡ ಕೂಡಿಕೊಂಡಿದ್ದ ಪಂತ್’ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಇಂಗ್ಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಮೊಯಿನ್ ಅಲಿ ಬದಲಿಗೆ ಲಿಯಾಮ್ ಫ್ಲಂಕೆಟ್‌ ಹಾಗೂ ಜೇಮ್ಸ್ ವಿನ್ಸ್ ಬದಲಿಗೆ ಜೇಸನ್ ರಾಯ್‌ಗೆ ಅವಕಾಶ ನೀಡಲಾಗಿದೆ. 

 

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ವಿರಾಟ್ ಪಡೆ, ಇದೀಗ ಆತಿಥೇಯ ತಂಡಕ್ಕೆ ಶಾಕ್ ಕೊಟ್ಟ ಸೆಮೀಸ್ ಪ್ರವೇಶ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ ಇಂಗ್ಲೆಂಡ್ ಇದೀಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 

ಎಡ್ಜ್ ಬಾಸ್ಟನ್ ಬೌಲಿಂಗ್ ಪಿಚ್ ಆಗಿದ್ದು, ಕಳೆದೆರಡು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡ ಜಯ ಸಾಧಿಸಿದೆ. 

ಬದಲಾವಣೆ: ವಿಜಯ್ ಶಂಕರ್ ಬದಲಿಗೆ ರಿಷಭ್ ಪಂತ್‌ಗೆ ಸ್ಥಾನ ನೀಡಲಾಗಿದೆ. ಮೊಯಿನ್ ಅಲಿ ಬದಲಿಗೆ ಲಿಯಾಮ್ ಫ್ಲಂಕೆಟ್‌, ವಿನ್ಸ್ ಬದಲಿಗೆ ರಾಯ್ ಅವಕಾಶ ನೀಡಲಾಗಿದೆ.

ತಂಡಗಳು ಹೀಗಿವೆ:

ಭಾರತ:

ಇಂಗ್ಲೆಂಡ್: