ನಾಟಿಂಗ್‌ಹ್ಯಾಮ್[ಜೂ.20]: ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 2019ರ ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸದಿದ್ದರೂ ನಿರಾಯಾಸವಾಗಿ ಮುನ್ನುಗ್ಗುತ್ತಿದೆ. ಆದರೆ ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿರುವ ಆಸೀಸ್‌ಗೆ ಸ್ವಲ್ಪ ಮಟ್ಟಿಗೆ ಆತಂಕ ಶುರುವಾಗಿದೆ.

ಸೌತ್ ಆಫ್ರಿಕಾ ವಿರುದ್ಧ ವಿಲಿಯಮ್ಸನ್ ಶತಕ- ನ್ಯೂಜಿಲೆಂಡ್‌ಗೆ ರೋಚಕ ಗೆಲುವು

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳನ್ನು ಬಗ್ಗು ಬಡಿದಿರುವ ಬಾಂಗ್ಲಾ ಹುಲಿಗಳು ಕಾಂಗರೂ ಬೇಟೆಗೆ ಕಾಯುತ್ತಿವೆ. ಆಲ್ರೌಂಡ್ ಪ್ರದರ್ಶನ ಮುಂದುವರಿಸಿರುವ ಶಕೀಬ್ ಅಲ್ ಹಸನ್, ಆ್ಯರೋನ್ ಫಿಂಚ್ ಪಡೆಗೆ ಭಯ ಹುಟ್ಟಿಸಿದ್ದಾರೆ. 5 ಪಂದ್ಯಗಳಿಂದ 5 ಅಂಕಗಳಿಸಿರುವ ಬಾಂಗ್ಲಾ, ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ.

ರಶೀದ್ ಖಾನ್ ಬಳಿ ಕ್ಷಮೆ ಕೇಳಿದ ಐಸ್‌ಲೆಂಡ್ ಕ್ರಿಕೆಟ್ ಮಂಡಳಿ!

ಮತ್ತೊಂದೆಡೆ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಆಸ್ಟ್ರೇಲಿಯಾ, ಈ ಪಂದ್ಯದಲ್ಲಿ ಜಯಿಸಿದರೆ ಸೆಮಿಫೈನಲ್ ಹಾದಿ ಸುಗಮಗೊಳ್ಳಲಿದೆ. ಫಿಂಚ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ನಿಯಂತ್ರಿಸುವುದು ಬಾಂಗ್ಲಾ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಲಿದೆ. ಅದೇ ರೀತಿ ತಮೀಮ್, ಸರ್ಕಾರ್, ಮುಷ್ಫಿಕುರ್, ಲಿಟನ್, ಶಕೀಬ್ ವಿರುದ್ಧ ಆಸೀಸ್ ವೇಗಿಗಳು ಯಶಸ್ಸು ಸಾಧಿಸಬೇಕಿದೆ. ಬಾಂಗ್ಲಾ ತಾನು ಕ್ರಿಕೆಟ್ ಶಿಶುವಾಗಿ ಉಳಿದಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದು, ರೋಚಕ ಪಂದ್ಯ ನಿರೀಕ್ಷೆ ಮಾಡಲಾಗಿದೆ.

ಸ್ಥಳ: ನಾಟಿಂಗ್‌ಹ್ಯಾಮ್
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1