ಟೌಂಟನ್(ಜೂ.17): ವಿಶ್ವಕಪ್ ಟೂರ್ನಿಯ 23ನೇ ಲೀಗ್ ಪಂದ್ಯದಲ್ಲಿಂದು ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಬಾಂಗ್ಲಾ ಹಾಗೂ ವಿಂಡೀಸ್ ತಂಡದಲ್ಲಿ ತಲಾ 1 ಬದಲಾವಣೆ ಮಾಡಲಾಗಿದೆ. ಬಾಂಗ್ಲಾದಲ್ಲಿ ಮಿಥುನ್ ಬದಲು ಲಿಟ್ಟನ್ ದಾಸ್ ತಂಡ ಸೇರಿಕೊಂಡಿದ್ದಾರೆ.

 

ವೆಸ್ಟ್ ಇಂಡೀಸ್ ತಂಡದಲ್ಲಿ ಕಾರ್ಲೋಸ್ ಬ್ರಾಥ್ವೈಟ್ ಬದಲು ಡರೆನ್ ಬ್ರಾವೋ ತಂಡ ಸೇರಿಕೊಂಡಿದ್ದಾರೆ. ವಿಂಡೀಸ್ ತಂಡದಲ್ಲಿ ಆಡಿದ 4 ರಲ್ಲಿ 1 ಗೆಲುವು, 2 ಸೋಲು ಹಾಗೂ 1 ಪಂದ್ಯ ಮಳೆಯಿಂದ ರದ್ದಾಗಿದೆ.