ಲೀಡ್ಸ್(ಜು.06): ವಿಶ್ವಕಪ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಶ್ರೀಲಂಕಾ ಹಿರಿಯ ಕ್ರಿಕೆಟಿಗ ಆ್ಯಂಜಲೋ ಮ್ಯಾಥ್ಯೂಸ್ ಟೂರ್ನಿ ಅಂತಿಮ ಹಂತದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಭಾರತ ವಿರುದ್ದ ಭರ್ಜರಿ ಶತಕ ಸಿಡಿಸಿ ಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾದರು. ಆದರೆ ಮ್ಯಾಥ್ಯೂಸ್ ಸೆಂಚುರಿ ಸಿಡಿಸುತ್ತಿದ್ದಂತೆ, ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಇದಕ್ಕೆ ಕಾರಣ ಮ್ಯಾಥ್ಯೂಸ್ ಶತಕ ಸಿಡಿಸಿದಾಗೆಲ್ಲಾ ಶ್ರೀಲಂಕಾ ಸೋಲು ಅನುಭವಿಸಿದೆ.

ಆ್ಯಂಜಲೋ ಮ್ಯಾಥ್ಯೂಸ್ ಏಕದಿನ ಕ್ರಿಕೆಟ್‌ನಲ್ಲಿ 3 ಸೆಂಚುರಿ ಪೂರೈಸಿದರು. ಮ್ಯಾಥ್ಯೂಸ್ 3 ಸೆಂಚುರಿಗಳು ಭಾರತದ ವಿರುದ್ಧವೇ ಸಿಡಿಸಿದ್ದಾರೆ. ಈ ಹಿಂದೆ 2 ಸೆಂಚುರಿ ಸಿಡಿಸಿದಾಗಲೂ ಶ್ರೀಲಂಕಾ ಸೋಲು ಕಂಡಿದೆ. ಹೀಗಾಗಿ ಈ ಬಾರಿಯೂ ಸೋಲು ಅನುಭವಿಸಲಿದೆ ಅನ್ನೋ ಆತಂಕ ಶುರುವಾಗಿದೆ. 2 ಬಾರಿ ಶತಕ ಸಿಡಿಸಿದ ಮ್ಯಾಥ್ಯೂಸ್ ಅಜೇಯರಾಗಿ ಉಳಿದಿದ್ದರು. ಆದರೆ ಈ ಬಾರಿ 113 ರನ್ ಸಿಡಿಸಿ ಔಟಾಗಿದ್ದಾರೆ. 

ಮಾಥ್ಯೂಸ್ ಶತಕ-ಲಂಕಾಗೆ ಸೋಲು!
139* v ಭಾರತ(ರಾಂಚಿ,2014) ಲಂಕಾಗೆ 3 ವಿಕೆಟ್ ಸೋಲು
111* v ಭಾರತ (ಮೊಹಾಲಿ,2017) ಲಂಕಾಗೆ 141 ರನ್ ಸೋಲು
113 v ಭಾರತ(ಲೀಡ್ಸ್,2019*) ?