ಸೌಥಾಂಪ್ಟನ್(ಜೂ.24): ವಿಶ್ವಕಪ್ ಟೂರ್ನಿಯ 31ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ  ಆಫ್ಘಾನಿಸ್ತಾನ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಬಾಂಗ್ಲಾದೇಶ 2 ಬದಲಾವಣೆ ಮಾಡಲಾಗಿದೆ. ಸೈಫುದ್ದೀನ್ ಹಾಗೂ ಮೊಸಾದೆಕ್ ಬದಲು ರುಬೆಲ್ ಹುಸೈನ್ ಹಾಗೂ ಸಬ್ಬೀರ್ ರಹಮಾನ್ ತಂಡ ಸೇರಿಕೊಂಡಿದ್ದಾರೆ. ಆಫ್ಘಾನಿಸ್ತಾನ ತಂಡದಲ್ಲೂ 2 ಬದಲಾವಣೆ ಮಾಡಲಾಗಿದೆ.

 

ವಿಶ್ವಕಪ್ ಟೂರ್ನಿಯಿಂದ ಆಫ್ಘಾನಿಸ್ತಾನ ಈಗಾಗಲೇ ಹೊರಬಿದ್ದಿದೆ. ಆದರೆ ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ವಿರೋಚಿತ ಸೋಲು ಅನುಭವಿಸಿದ ಬೆನ್ನಲ್ಲೇ ಆಫ್ಘಾನ್ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೀಗ ಬಾಂಗ್ಲಾದೇಶ ತಂಡಕ್ಕೆ ಶಾಕ್ ನೀಡೋ ವಿಶ್ವಾಸದಲ್ಲಿದೆ. ಇತ್ತ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಅಫ್ಘಾನ್ ವಿರುದ್ಧದ ಗೆಲುವಿನೊಂದಿಗೆ ಸೆಮಿಫೈನಲ್ ಆಸೆ ಜೀವಂತವಾಗಿರಿಸಲು ಬಾಂಗ್ಲಾ ಹವಣಿಸುತ್ತಿದೆ.