ಬರ್ಮಿಂಗ್ ಹ್ಯಾಮ್[ಜು.11]: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.

 

ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಉಸ್ಮಾನ್ ಖವಾಜಾ ಬದಲಿಗೆ ಪೀಟರ್ ಹ್ಯಾಂಡ್ಸ್‌ಕಂಬ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಇದೀಗ ಮತ್ತೊಮ್ಮೆ ಫೈನಲ್’ನತ್ತ ಚಿತ್ತ ನೆಟ್ಟಿದ್ದರೆ, ಬರೋಬ್ಬರು 27 ವರ್ಷಗಳ ಬಳಿಕ ಇಂಗ್ಲೆಂಡ್ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. 1993ರ ಬಳಿಕ ಆಸ್ಟ್ರೇಲಿಯಾ ತಂಡವು ಎಡ್ಜ್ ಬಾಸ್ಟನ್ ಪಂದ್ಯದಲ್ಲಿ ಗೆಲುವು ದಾಖಲಿಸಿಲ್ಲ.  

ಕುತೂಹಲಕಾರಿ ಸಂಗತಿಯೆಂದರೆ, ಆಸ್ಟ್ರೇಲಿಯಾ ಇದುವರೆಗೂ 7 ಬಾರಿ ಸೆಮೀಸ್ ಪ್ರವೇಶಿಸಿದ್ದು, ಏಳರಲ್ಲೂ ಜಯಭೇರಿ ಬಾರಿಸಿದ ಸಾಧನೆ ಮಾಡಿದೆ. ಇನ್ನು ಇಂಗ್ಲೆಂಡ್ ಕೇವಲ ಮೂರು ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಅಂತಿ ನಾಲ್ಕರಘಟ್ಟ ಪ್ರವೇಶಿಸಿದ್ದು, ಎರಡರಲ್ಲಿ ಮಾತ್ರ ಗೆಲುವು ಕಂಡಿದೆ.  

ತಂಡಗಳು ಹೀಗಿವೆ:

ಆಸ್ಟ್ರೇಲಿಯಾ:

ಇಂಗ್ಲೆಂಡ್: