ವಿಶ್ವಕಪ್ ಪಂದ್ಯದ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಂಡನ್‌(ಜೂ.29): ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ರ ಪತ್ನಿ ಕ್ಯಾಂಡೈಸ್‌ ಭಾನುವಾರ 3ನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಶನಿವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದ ಬಳಿಕ ಆಸ್ಪ್ರೇಲಿಯಾ ತಂಡಕ್ಕೆ ಒಂದು ವಾರ ವಿರಾಮವಿದ್ದು, ಈ ಸಮಯದಲ್ಲಿ ವಾರ್ನರ್‌ ಪತ್ನಿಯನ್ನು ಹೆರಿಗಾಗಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದಾರೆ. ಈ ತಿಂಗಳ ಆರಂಭದಲ್ಲೇ ಕ್ಯಾಂಡೈಸ್‌, ಆಸ್ಪ್ರೇಲಿಯಾದಿಂದ ಹೊರಟು ಲಂಡನ್‌ ತಲುಪಿದ್ದರು. ವಾರ್ನರ್‌ಗೆ ಸದ್ಯ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇದನ್ನೂ ಓದಿ: ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾಗಿದ್ದ ಡೇವಿಡ್ ವಾರ್ನರ್ ಸಾಕಷ್ಟು ನೋವು ಅನುಭವಿಸಿದ್ದಾರೆ. ವಾರ್ನರ್ ಹಾಗೂ ಕುಟುಂಬ ಹೆಜ್ಜೆ ಹೆಜ್ಜೆಗೂ ಅವಮಾನ ಎದುರಿಸಿತು. ಇದೇ ವೇಳೆ ವಾರ್ನರ್ ಪತ್ನಿ ಕ್ಯಾಂಡೈಸ್ 2 ಬಾರಿ ಗರ್ಭಪಾತವಾಗಿತ್ತು. ಲಂಡನ್‌ನಲ್ಲಿ ವಾರ್ನರ್ ಪತ್ನಿ 3ನೇ ಮಗುವಿಗೆ ಜನ್ಮ ನೀಡಲಿದ್ದಾರೆ.