ಲಾರ್ಡ್ಸ್(ಜು.15): ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅದೃಷ್ಠ ಚೆನ್ನಾಗಿತ್ತು. ನ್ಯೂಜಿಲೆಂಡ್ ಮಾಡಿದ  ಥ್ರೋನಿಂದ ಹೆಚ್ಚುವರಿ 4 ರನ್, ಫೀಲ್ಡಿಂಗ್‌ನಲ್ಲಿ ಬೋಲ್ಟ್ ಕ್ಯಾಚ್ ಹಿಡಿದು ಬೌಂಡರಿ  ಗೆರೆ ದಾಟಿ ಸಿಕ್ಸರ್ ನೀಡಿದ್ದು ಸೇರಿದಂತೆ ಹಲವು ಘಟನೆಗಳು ಇಂಗ್ಲೆಂಡ್ ತಂಡವನ್ನು ಸೋಲಿನಿಂದ ಪಾರು ಮಾಡಿತು. ಟ್ರೋಫಿ ಗೆಲುವಿನ ಬಳಿಕ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ವಿಲನ್ ಈಗ ಹೀರೋ; ಹೀರೋ ಆಗಿದ್ದವ ಝಿರೋ: ಇದು ವಿಶ್ವಕಪ್ ಕತೆ!

ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಆದಾಗ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು. ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದು ಸಂಭ್ರಮ ಆಚರಿಸಿತು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಮಾರ್ಗನ್, ತಮ್ಮ ಗೆಲುವಿಗೆ ಕಾರಣ ನೀಡಿದರು. ಮೂಲತಃ ಐರ್ಲೆಂಡ್ ದೇಶದವರಾಗಿರುವ ಮಾರ್ಗನ್‌ಗೆ, ಐರೀಶ್ ಲಕ್  ಗೆಲುವಿಗೆ ಕಾರಣವಾಗಿತ್ತಾ ಅನ್ನೋ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗನ್, ಅಲ್ಲಾ ನಮ್ಮ ಜೊತೆಗಿದ್ದ. ಹೀಗಾಗಿ ಗೆಲುವು  ನಮ್ಮದಾಯಿತು ಎಂದಿದ್ದಾರೆ. 

 

ಇದನ್ನೂ ಓದಿ: ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಒತ್ತಡ ಹೆಚ್ಚಾಯಿತು. ಈ ವೇಳೆ ಆದಿಲ್ ರಶೀದ್ ಬಳಿ ಮಾತನಾಡಿದ್ದೆ, ಅಲ್ಲಾ ನಮ್ಮ ಜೊತೆಗಿದ್ದಾನೆ, ಗೆಲುವು ನಮ್ಮದೆ ಎಂದು ರಶೀದ್ ಹೇಳಿದರು. ನಮ್ಮ ತಂಡದಲ್ಲಿ ಇತರ ದೇಶದ ಆಟಗಾರರಿದ್ದಾರೆ. ಆದರೆ ಡ್ರೆಸ್ಸಿಂಗ್‌ರೂಂನಲ್ಲಿ ನಾವೆಲ್ಲ ಒಂದೇ ಎಂದು ಮಾರ್ಗನ್ ಹೇಳಿದರು.