Asianet Suvarna News Asianet Suvarna News

ಸೌತ್ ಆಫ್ರಿಕಾ-ಅಫ್ಘಾನಿಸ್ತಾನ್ ವಿಶ್ವಕಪ್ ಪಂದ್ಯ- ಮಳೆಯಿಂದ ಓವರ್ ಕಡಿತ!

ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಪಡಿಸಿದ ಕಾರಣ ಓವರ್ ಕಡಿತಗೊಳಿಸಲಾಗಿದೆ. ಸದ್ಯ ಪಂದ್ಯ ಪುನರ್ ಆರಂಭಗೊಂಡಿದೆ. 

South Africa vs Afghanistan World cup match over reduced due to rain
Author
Bengaluru, First Published Jun 15, 2019, 9:24 PM IST

ಕಾರ್ಡಿಫ್(ಜೂ.15): ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ 48 ಓವರ್‌ಗೆ ಸೀಮಿತಗೊಳಿಸಲಾಗಿದೆ. 20 ಓವರ್ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ ಸುರಿದ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ ನಿಂತಿದ್ದು, ಪಂದ್ಯ ಪುನರ್ ಆರಂಭಗೊಂಡಿದೆ. ಆದರೆ 2 ಓವರ್ ಕಡಿತಗೊಳಿಸಲಾಗಿದೆ.

 

UPDATE: Play will resume at 4:35pm local time, with the innings curtailed to 48 overs per side.

— Cricket World Cup (@cricketworldcup) June 15, 2019

ಟಾಸ್ ಸೋತು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 69 ರನ್ ಸಿಡಿಸಿತ್ತು.  ಈ ವೇಳೆ ಸುರಿದ ಮಳೆಯಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಝರ್ದಾನ್ ಅಜೇಯ 32 ಹಾಗೂ ಹಶ್ಮುತುಲ್ಹಾ ಶಾಹಿದಿ ಅಜೇಯ 8 ರನ್ ಸಿಡಿಸಿದ್ದರು. ಪಂದ್ಯ ಪುನರ್ ಆರಂಭಗೊಳ್ಳುತ್ತಿದ್ದಂತೆ, ಅಫ್ಘಾನಿಸ್ತಾನ ದಿಢೀರ್ ವಿಕೆಟ್  ಕಳೆದುಕೊಂಡಿದೆ.

Follow Us:
Download App:
  • android
  • ios