ನವದೆಹಲಿ(ಜು.17): ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಐಸಿಸಿ ಏಕದಿನ ವಿಶ್ವಕಪ್‌ನ ಕನಸಿನ ತಂಡವನ್ನು ಆಯ್ಕೆ ಮಾಡಿದ್ದು ಭಾರತದ ಐವರು ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಸಚಿನ್‌ರ ತಂಡದಲ್ಲಿ ಧೋನಿಗೆ ಸ್ಥಾನ ಸಿಕ್ಕಿಲ್ಲ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋವ್‌ರನ್ನು ಆಯ್ಕೆ ಮಾಡಿದ್ದಾರೆ. ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ರನ್ನು ತೆಂಡುಲ್ಕರ್‌ ತಮ್ಮ ಕನಸಿನ ತಂಡದ ನಾಯಕರನ್ನಾಗಿ ಹೆಸರಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಅಂಪೈರ್‌ ಗಳ ಭಾರೀ ಎಡವಟ್ಟು

ಸಚಿನ್‌ರ ವಿಶ್ವಕಪ್‌ ತಂಡ: ರೋಹಿತ್‌ ಶರ್ಮಾ, ಜಾನಿ ಬೇರ್‌ಸ್ಟೋವ್‌(ವಿಕೆಟ್‌ ಕೀಪರ್‌), ಕೇನ್‌ ವಿಲಿಯಮ್ಸನ್‌(ನಾಯಕ), ವಿರಾಟ್‌ ಕೊಹ್ಲಿ, ಶಕೀಬ್‌ ಅಲ್‌ ಹಸನ್‌, ಬೆನ್‌ ಸ್ಟೋಕ್ಸ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಮಿಚೆಲ್‌ ಸ್ಟಾರ್ಕ್, ಜಸ್‌ಪ್ರೀತ್‌ ಬೂಮ್ರಾ, ಜೋಫ್ರಾ ಆರ್ಚರ್‌.