ಮುಂಬೈ(ಜು.11): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲು ಬೇಸರ ತಂದಿದೆ. ಆದರೆ ಅಭಿಮಾನಿಗಳು ಭಾರತದ ಹೋರಾಟವನ್ನು ಮೆಚ್ಚಿದ್ದಾರೆ. ಕೆಲ ಅಭಿಮಾನಿಗಳು ಸೋಲಿಗೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ ಇನ್ನೂ ಕೆಲವು ಸೋಲಿಗೆ ಕಾರಣಗಳನ್ನು ಹೇಳಿದ್ದಾರೆ. ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ ಟೀಂ ಇಂಡಿಯಾ ಸೋಲಿಗೆ ಆಕ್ರೋಶ ವ್ಯಕ್ತಪಡಿಸೋ ಜೊತೆಗೆ ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರೇ ಸೋಲಿಗೆ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕ್..!

ಯಾವ ಕ್ರಿಕೆಟಿಗರ ಪತ್ನಿಯರು ಇಂಗ್ಲೆಂಡ್ ತೆರಳಿದ್ದಾರೋ ಅವರೆಲ್ಲಾ ಬಹುಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪತ್ನಿಯರು ಜೊತೆಗಿದ್ದ ಕ್ರಿಕೆಟಿಗರಿಗೆ ಶಕ್ತಿಯೇ ಇರಲ್ಲಿಲ್ಲ ಎಂದು ರಾಖಿ ಆರೋಪಿಸಿದ್ದಾರೆ. ಈ ವಿಶ್ವಕಪ್ ಟೂರ್ನಿ, ಕ್ರಿಕೆಟ್‌ಗಿಂತ ಹೆಚ್ಚು ಹನಿಮೂನ್ ಆಗಿತ್ತು. ಹೀಗಾಗಿಯೇ ಟೀಂ ಇಂಡಿಯಾ ಸೋಲು ಕಂಡಿದೆ ಎಂದಿದ್ದಾರೆ. ರಾಖಿ ಆಕ್ರೋಶದ ನುಡಿಗಳು ಇಲ್ಲಿವೆ.