ನಾಟಿಂಗ್‌ಹ್ಯಾಮ್(ಜೂ.20): ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಲೀಗ್ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದೆ.  ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸಿಸ್ 49 ಓವರ್ ಬ್ಯಾಟಿಂಗ್ ಮಾಡಿತು. ಇನ್ನೇನು ಒಂದು ಓವರ್ ಬಾಕಿ ಇರುವರಷ್ಟರಲ್ಲೇ ಮಳೆ ಸುರಿಯಿತು. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.

ಡೇವಿಡ್ ವಾರ್ನರ್ 166 ರನ್, ಆರೋನ್ ಫಿಂಚ್ 53, ಉಸ್ಮಾನ್ ಖವಾಜ 89 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 32 ರನ್ ನೆರವಿನಿಂದ ಆಸಿಸ್ 49 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ  368 ರನ್ ಸಿಡಿಸಿದೆ. ಇದೀಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ.