ಲಾರ್ಡ್ಸ್(ಜು.14): ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟೂರ್ನಿಯನ್ನು ಸ್ಮರಣೀಯವಾಗಿಸಲು ಪ್ಯಾರಾಚ್ಯೂಟ್ ಮೂಲಕ ಆಗಸದಿಂದ ಹಾರಾಡಿ ಬಂದ ರೆಡ್ ಡೆವಿಲ್ಸ್ ತಂಡ ಮ್ಯಾಚ್ ಬಾಲ್ ನೀಡಿತು. ಈ ರೋಮಾಂಚನ ದೃಶ್ಯದ ಬೆನ್ನಲ್ಲೇ, ಮಹಿಳೆಯೊಬ್ಬರು ಮೈದಾನಕ್ಕೆ ನುಗ್ಗಿ ಬೆತ್ತಲೆಯಾಗಲು ಯತ್ನಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಅಂಟಿಕೊಂಡಿತಾ ಚೋಕರ್ಸ್ ಪಟ್ಟ?

ಮಳೆಯಿಂದ ಪಂದ್ಯ ಆರಂಭ ಕೊಂಚ ತಂಡವಾಗಿತ್ತು. ಈ ವೇಳೆ ಪೋರ್ನ್ ಸ್ಟಾರ್ ಎಲೆನಾ ವುಲಿಟ್‌ಸ್ಕೈ ಭದ್ರತಾ ಸಿಬ್ಬಂಧಿ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ್ದಾರೆ. ಇಷ್ಟೇ ಅಲ್ಲ ಬೆತ್ತಲೆಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭ್ರದತಾ ಸಿಬ್ಬಂಧಿ ಎಲೆನಾ ಬಂಧಿಸಿ ಕರೆದೊಯ್ದಿದ್ದಾರೆ.

 

ಎಲೆನಾ ವಯಸ್ಕರ(ಪೋರ್ನ್) ವೆಬ್‌ಸೈಟ್ ನಡೆಸುತ್ತಿದ್ದಾರೆ. ಇದರ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ. ಮೈದಾನಕ್ಕೆ ನುಗ್ಗಿ ಬೆತ್ತಲಾಗುವುದು ಎಲೆನಾಗೆ ಹೊಸದೇನಲ್ಲ. ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಎಲೆನಾ ಬೆತ್ತಲೆಯಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಭದ್ರತಾ ಸಿಬ್ಬಂದಿ ಬಂಧಿಸಿದ್ದರು.