ಲಂಡನ್‌[ಜು.05]: ಕಾರ್‌ ಪ್ರೇಮಿ ಸಚಿನ್‌ ತೆಂಡುಲ್ಕರ್‌ ಇಲ್ಲಿನ ರಾಯಲ್‌ ಆಟೋಮೊಬೈಲ್‌ ಕ್ಲಬ್‌ಗೆ ಭೇಟಿ ನೀಡಿ 119 ವರ್ಷದ ಹಳೆಯ ಕಾರು ಓಡಿಸಿ ಗಮನ ಸೆಳೆದರು. 

ಪತ್ನಿ ಅಂಜಲಿಯನ್ನು ಸಹ ಜತೆಯಲ್ಲಿ ಕರೆದೊಯ್ದ ಸಚಿನ್‌, ಅಭಿಮಾನಿಗಳತ್ತ ಕೈಬೀಸಿ ಸಂತಸ ಪಟ್ಟರು. ಈ ಕಾರು 1900ರ ಸಮಯದಲ್ಲಿ ತಯಾರಾಗಿದ್ದು ಎನ್ನಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 28 ಕಿ.ಮೀ. ಎಂದು ಮೂಲಗಳು ತಿಳಿಸಿವೆ.

ಹೀಗಿತ್ತು ನೋಡಿ ತೆಂಡುಲ್ಕರ್ ಕಾರು ಓಡಿಸಿದ ಪರಿ:

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕ್ರಿಕೆಟ್  ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿನ್ ಹೇಳಿ-ಕೇಳಿ ಕಾರು ಪ್ರೇಮಿಯಾಗಿದ್ದು, ಕೆಲದಿನಗಳ ಹಿಂದಷ್ಟೇ ಫಾರ್ಮುಲಾ ಕಾರು ಓಡಿಸಿದ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದರು.