ಲಂಡನ್‌(ಜು.13): ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಧರ್ಮಸೇನಾ, ದ.ಆಫ್ರಿಕಾದ ಮರಾಯಸ್‌ ಎರಾಸ್ಮಸ್‌ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಇಂಗ್ಲೆಂಡ್ vs ನ್ಯೂಜಿಲೆಂಡ್ ವಿಶ್ವಕಪ್ ಫೈನಲ್; ಯಾರೂ ಗೆದ್ದರೂ ಇತಿಹಾಸ!

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಣಸಾಡಲಿವೆ. ಆಸ್ಪ್ರೇಲಿಯಾದ ರಾಡ್‌ ಟಕ್ಕರ್‌ರನ್ನು 3ನೇ ಅಂಪೈರ್‌, ಪಾಕಿಸ್ತಾನದ ಅಲೀಂ ದಾರ್‌ರನ್ನು 4ನೇ ಅಂಪೈರ್‌ ಆಗಿ ಐಸಿಸಿ ಹೆಸರಿಸಿದೆ.ಶ್ರೀಲಂಕಾದ ರಂಜನ್‌ ಮದುಗಲೆ ಮ್ಯಾಚ್‌ ರೆಫ್ರಿಯಾಗಿರಲಿದ್ದಾರೆ. 

ಈ ಎಲ್ಲರೂ ಇಂಗ್ಲೆಂಡ್‌-ಆಸ್ಪ್ರೇಲಿಯಾ ನಡುವಿನ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದರು. ಸೆಮೀಸ್‌ನಲ್ಲಿ ಇಂಗ್ಲೆಂಡ್‌ನ ಜೇಸನ್‌ ರಾಯ್‌ ವಿರುದ್ಧ ಕೆಟ್ಟತೀರ್ಪು ನೀಡಿದ್ದ ಹೊರತಾಗಿಯೂ ಧರ್ಮಸೇನಾಗೆ ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.