ಲಾರ್ಡ್ಸ್(ಜು.13): ಟೀಂ ಇಂಡಿಯಾವನ್ನು ಮಣಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿರುವ ನ್ಯೂಜಿಲೆಂಡ್, ಆತಿಥೇಯ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದತ್ತ ಎಲ್ಲರ ಕುತೂಹಲ ನೆಟ್ಟಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ವೇಗಿ ಜಿಮ್ಮಿ ನೀಶಮ್, ಭಾರತೀಯ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಎಬಿಡಿ ನಿವೃತ್ತಿ ವಾಪಾಸ್ ವಿಚಾರ: ಕೊನೆಗೂ ಮೌನ ಮುರಿದ ಮಿ.360 ಆಡಿದ ಮನದಾಳದ ಮಾತುಗಳಿವು...

ಟೀಂ ಇಂಡಿಯಾ ಫೈನಲ್ ಪ್ರವೇಶಿಸಲಿದೆ ಎಂದು ಹಲವು ಭಾರತೀಯ ಅಭಿಮಾನಿಗಳು ಫೈನಲ್ ಪಂದ್ಯದ ಟಿಕೆಟ್ ಖರೀದಿಸಿದ್ದಾರೆ. ಇದೀಗ ನೀಶಮ್ ಈ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ನೀವು ಫೈನಲ್ ಪಂದ್ಯ ನೋಡಲು ಇಚ್ಚಿಸುವುದಿಲ್ಲದಿದ್ದರೆ, ನಿಮ್ಮಲ್ಲಿರುವ ಟಿಕೆಟ್‌ಗಳನ್ನು ಐಸಿಸಿಗೆ ಮರಳಿಸಿ, ಇದರಿಂದ  ಫೈನಲ್ ಪಂದ್ಯಕ್ಕೆ ಹಾತೊರೆಯುವ ಅಭಿಮಾನಿಗಳಿಗೆ ಸಹಾಯವಾಗಲಿದೆ ಎಂದು ನೀಶಮ್ ಟ್ವೀಟ್ ಮಾಡಿದ್ದಾರೆ.

 

ಭಾರತ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 18 ರನ್ ರೋಚಕ ಗೆಲುವು ಸಾಧಿಸಿತ್ತು. ರವೀಂದ್ರ ಜಡೇಜಾ ಹಾಗೂ ಎಂ.ಎಸ್.ಧೋನಿ ಹೋರಾಟ ನೀಡಿದರೂ ಭಾರತಕ್ಕೆ ಗೆಲುವು ಸಿಗಲಿಲ್ಲ. ಹೀಗಾಗಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿದ್ದ ಭಾರತ, ಟೂರ್ನಿಯಿಂದ ಹೊರಬಿತ್ತು.