ವಿಶ್ವಕಪ್ 2019: ಪಾಕ್ ವಿರುದ್ಧ ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್
ಬದ್ದವೈರಿ ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ. ರೋಹಿತ್ ಸೆಂಚುರಿ ಇನ್ನಿಂಗ್ಸ್ ಹಾಗೂ ದಾಖಲೆ ವಿವರ ಇಲ್ಲಿದೆ.
ಮ್ಯಾಂಚೆಸ್ಟರ್(ಜೂ.16): ಪಾಕಿಸ್ತಾನ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2015ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಸಾಧನೆ ಮಾಡಿದ್ದಾರೆ.
2019ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ 2 ಸೆಂಚುರಿ ಸಿಡಿಸಿ ಸಾಧನೆ ಮಾಡಿದ್ದಾರೆ.ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ದರು. ಇದೀಗ ಪಾಕ್ ವಿರುದ್ಧವೂ ಶತಕ ಸಿಡಿಸಿದ್ದಾರೆ. ಈ ಸೆಂಚುರಿ ಮೂಲಕ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 24 ಶತಕ ಪೂರೈಸಿದರು. ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 24 ಶತಕ ಪೂರೈಸಿದ ಭಾರತದ 2ನೇ ಬ್ಯಾಟ್ಸ್‌ಮನ್ ಅನ್ನೋ ಕೀರ್ತಿಗೆ ರೋಹಿತ್ ಪಾತ್ರರಾಗಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ 161 ಇನ್ನಿಂಗ್ಸ್‌ಗಳಲ್ಲಿ 24 ಶತಕ ಪೂರೈಸಿದ್ದರು. ಇನ್ನು ಸಚಿನ್ ತೆಂಡುಲ್ಕರ್ 219 ಇನ್ನಿಂಗ್ಸ್‌ಗಳಲ್ಲಿ 24 ಶತಕಗಳನ್ನು ಬಾರಿಸಿದ್ದರು. ಈ ದಾಖಲೆಯನ್ನು ರೋಹಿತ್ ಅಳಿಸಿಹಾಕಿದ್ದಾರೆ. ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 24 ಶತಕ ಪೂರೈಸಿದ ದಾಖಲೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಶೀಮ್ ಆಮ್ಲಾ ಹೆಸರಿನಲ್ಲಿದೆ. ಆಮ್ಲಾ ಒಟ್ಟು 142 ಇನ್ನಿಂಗ್ಸ್‌ಗಳಲ್ಲಿ 24 ಶತಕ ಪೂರೈಸಿದ್ದಾರೆ.
ಉತ್ತಮ ಆರಂಭ ನೀಡಿದ ರೋಹಿತ್ ಶರ್ಮಾ ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 85 ಎಸೆತದಲ್ಲಿ ರೋಹಿತ್ ಶತಕ ಸಿಡಿಸಿದರು. ರೋಹಿತ್ ಸೆಂಚುರಿ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿದೆ.
ಈ ಹಿಂದಿನ 5 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಪ್ರದರ್ಶನ
95(92)
56(89)
122(144)*
57(70)
100(85)*