ಮ್ಯಾಂಚೆಸ್ಟರ್(ಜೂ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಅಭಿಮಾನಿಗಳ ಕುತೂಹಲನ್ನು ಇಮ್ಮಡಿಗೊಳಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಪಾಕಿಸ್ತಾನ ಕರಾರುವಕ್ ದಾಳಿಗೆ ಮುಂದಾಗಿದೆ. ಈ ರೋಚಕ ಪಂದ್ಯ ವೀಕ್ಷಿಸಲು ಅಭಿಮಾನಿಯೋರ್ವ ಕುದುರೆ ಏರಿ ಕ್ರೀಡಾಂಗಣಕ್ಕೆ ಆಗಮಿಸಿದ್ದಾನೆ.

 

ಒಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಡೋ-ಪಾಕ್ ಹೋರಾಟಕ್ಕೆ ಕುದುರೆ ಮೂಲಕ ಆಗಮಿಸಿದ ಪಾಕಿಸ್ತಾನ ಅಭಿಮಾನಿ ಎಲ್ಲರ ಗಮನಸೆಳೆದಿದ್ದಾನೆ. ಕುದುರೆ ಮೂಲಕ ಕ್ರೀಡಾಂಗಣಕ್ಕೆ ಆಗಮಿಸಿದ ಅಭಿಮಾನಿ ವೀಡಿಯೋ ಇದೀಗ ವೈರಲ್ ಆಗಿದೆ.