ಲಾರ್ಡ್ಸ್(ಜು.15): 2019ರ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ ಅಬ್ಬರಿಸಿದರೆ, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಬೌಲರ್‌ಗಳೇ ಹೀರೋಗಳಾದರು. ಲೋ ಸ್ಕೋರ್ ಗೇಮ್‌ನಲ್ಲೂ ರೋಚಕತೆ ತಂದುಕೊಟ್ಟ ಕೀರ್ತಿ ಬೌಲರ್‌ಗಳಿಗೆ ಸಲ್ಲಲಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ವಿಕೆಟ್ ಕಬಳಿಸಿ ಎದುರಾಳಿಗೆ ಮಾತ್ರವಲ್ಲ ಅಭಿಮಾನಿಗಳಿಗೂ ಶಾಕ್ ನೀಡಿದ್ದಾರೆ.

ಈ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 10 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ನ್ಯೂಜಿಲೆಂಡ್ ವೇಗಿ ಲೂಕಿ ಫರ್ಗ್ಯುಸನ್   9 ಪಂದ್ಯಗಳಿಂದ 21, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ 11 ಪಂದ್ಯಗಳಲ್ಲಿ 20 ವಿಕೆಟ್, ಬಾಂಗ್ಲಾದೇಶದ ಮುಸ್ತಾಫಿಝುರ್ ರಹೆಮಾನ್ 8 ಪಂದ್ಯಿಂದ 20 ಹಾಗೂ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 9 ಪಂದ್ಯಗಳಿಂದ 18 ವಿಕೆಟ್ ಉರುಳಿಸಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.