ಬೆಂಗಳೂರು(ಜು.05): ಕಾಂಗ್ರೆಸ್ ಶಾಸಕರ ರಾಜಿನಾಮೆ, ರಾಜ್ಯ ರಾಜಕೀಯದ ದೊಂಬರಾಟ, ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ಚಿಂತೆಯಲ್ಲೇ ಮುಳುಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ರಾಜಕೀಯ ಬಿಟ್ಟು ವಿಶ್ವಕಪ್ ಭವಿಷ್ಯ ನುಡಿದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್,  ಸೆಮಿಫೈನಲ್ ಪಂದ್ಯದ ಭವಿಷ್ಯವನ್ನು ಸಿದ್ದು ಹೇಳಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್ ಸೆಮೀಸ್‌ನಲ್ಲಿ ಟಾಪ್ 4 ತಂಡಗಳ ಸೆಣಸಾಟ

ಸಿದ್ದರಾಮಯ್ಯ ಪ್ರಕಾರ, ಈ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಣಿಸಿ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ಹೇಳಿದರು. ಇತ್ತ ಸೆಮಿಫೈನಲ್ ಕುರಿತು ಸಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈಗಾಗಲೇ ಇಂಗ್ಲೆಂಡ್, ಟೀಂ ಇಂಡಿಯಾವನ್ನು ಸೋಲಿಸಿರಬಹುದು. ಆದರೆ ಸೆಮೀಸ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಮಣಿಸಲಿದೆ ಎಂದರು.

ಇದನ್ನೂ ಓದಿ: ಹಾಡಿನ ಮೂಲಕ ಅಭಿಮಾನಿಗಳ ಮನಗೆಲ್ಲೋ ಪ್ರಯತ್ನ ಮಾಡಿದ ಮಂಜ್ರೇಕರ್!

ಇಂಗ್ಲೆಂಡ್ ತಂಡಕ್ಕಿಂತ ಟೀಂ ಇಂಡಿಯಾ ಬಲಿಷ್ಠವಾಗಿದೆ. ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರು ನನ್ನ ನೆಚ್ಚಿನ ಆಟಗಾರರು. ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 4 ಸೆಂಚುರಿ ಸಾಧನೆ ಮಾಡಿರಬಹುದು. ಆದೆರೆ ನಾಯಕ ವಿರಾಟ್ ಕೊಹ್ಲಿ ವಿಶ್ವದಲ್ಲೇ ನಂಬರ್ 1 ಬ್ಯಾಟ್ಸ್‌ಮನ್ ಎಂದರು. ವಿಶ್ವಕಪ್ ಪಂದ್ಯ ನೋಡಲು ಲಂಡನ್ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಟಿವಿ ಮೂಲಕ ಪಂದ್ಯ ನೋಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.