ಸೌತ್ ಆಫ್ರಿಕಾ vs ಶ್ರೀಲಂಕಾ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.28): ವಿಶ್ವಕಪ್ ಟೂರ್ನಿಯಲ್ಲಿ ವಿಜಯ್ ಶಂಕರ್ ಸುದ್ದಿಯಾಗುತ್ತಲೇ ಇದ್ದಾರೆ.  ವಿಶ್ವಕಪ್ ತಂಡದ ಆಯ್ಕೆಯಿಂದ ಹಿಡಿದು ಇದೀಗ ಟೂರ್ನಿ ಅಂತಿಮ ಘಟ್ಟ ತಲುಪುವ ವರೆಗೂ ವಿಜಯ್ ಶಂಕರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಆರಂಭದಲ್ಲಿ ನಾಲ್ಕನೇ ಕ್ರಮಾಂಕಕ್ಕೆ  ಅಂಬಾಟಿ ರಾಯುಡು ಬದಲು ವಿಜಯ್ ಶಂಕರ್ ಆಯ್ಕೆ ಎಲ್ಲರ ಟೀಕೆಗೆ ಗುರಿಯಾಗಿತ್ತು.  ಇತ್ತ ರೊಚ್ಚಿಗೆದ್ದ ಅಂಬಾಟಿ ರಾಯುಡು ಟ್ವೀಟ್ ಮಾಡೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಶಿಖರ್ ಧವನ್ ಇಂಜುರಿ ಬೆನ್ನಲ್ಲೇ ವಿಜಯ್ ಶಂಕರ್‌ ಹನ್ನೊಂದರ ಬಳಗದಲ್ಲಿ ಆಡೋ ಅವಕಾಶ ಗಿಟ್ಟಿಸಿಕೊಂಡರು. 

ಇದನ್ನೂ ಓದಿ: ಶೆಲ್ಡಾನ್ ಕಾಟ್ರೆಲ್‌ಗೆ ಆರ್ಮಿ ಸೆಂಡ್ ಆಫ್ ನೀಡಿದ ಶಮಿ!

ಪಾಕಿಸ್ತಾನ ವಿರುದ್ಧದ ವಿಕೆಟ್ ಕಬಳಿಸಿದ ಸಾಧನೆ ಹೊರತು ಪಡಿಸಿದರೆ ವಿಜಯ್ ಶಂಕರ್ ಹೇಳಿಕೊಳ್ಳೋ ಪ್ರದರ್ಶನ ನೀಡಿಲ್ಲ. ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಆಯ್ಕೆ ಹೇಗಾಯ್ತು ಅನ್ನೋದೇ ಇದೀಗ ಟ್ರೋಲ್ ಆಗುತ್ತಿದೆ. ಬ್ಯಾಟಿಂಗ್ ಆಗ್ತಿಲ್ಲ, ಬೌಲಿಂಗ್ ಕೊಡ್ತಿಲ್ಲ, ಇಷ್ಟಾದರೂ ತಂಡದಲ್ಲಿ ಸ್ಥಾನ ಹೇಗೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.