ನಾಟಿಂಗ್‌ಹ್ಯಾಮ್(ಜೂ.21): ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎಲ್ಲರ ಗಮನಸಳೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಬಾಂಗ್ಲಾ ವಿರೋಚಿತ ಸೋಲು ಕಂಡರೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆಸ್ಟ್ರೇಲಿಯಾ ನೀಡಿದ 382 ರನ್ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ 333 ರನ್ ಸಿಡಿಸಿ 48 ರನ್ ಸೋಲು ಅನುಭವಿಸಿತು. ಆದರೆ ಚೇಸಿಂಗ್ ವೇಳೆ ಬಾಂಗ್ಲಾ ದಿಟ್ಟ ಹೋರಾಟಕ್ಕೆ ಕ್ರಿಕೆಟ್ ದಿಗ್ಗಜರು ಮನಸೋತಿದ್ದಾರೆ.