Asianet Suvarna News Asianet Suvarna News

ಸುಳ್ಳಾದ ಸಿದ್ದು ಭವಿಷ್ಯಗಳು.. ಸರಕಾರದ ಕತೆ ಬಿಡ್ರಿ..ಇದು ಮೊದಲೇನಲ್ಲ ನೋಡ್ರಿ!

ಅವರ ಅಪ್ಪನಾಣೆ ಸಿಎಂ ಆಗಲ್ಲ... ಮೋದಿ ಮತ್ತೆ ಪ್ರಧಾನಿಯಾಗಲ್ಲ.. ಈ ಬಾರಿ ಭಾರತ ವಿಶ್ವಕಪ್ ಗೆಲ್ಲಲಿದೆ... ಹೌದು ಈ ಎಲ್ಲ ಭವಿಷ್ಯ ಹೇಳಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅವೆಲ್ಲವೂ ಉಲ್ಟಾ ಹೊಡೆದಿರುವುದು ಮಾತ್ರ ಕಾಕತಾಳೀಯ.

Congress Leader siddaramaiah-prediction-about- ICC world-cup- 2019 failed
Author
Bengaluru, First Published Jul 10, 2019, 9:37 PM IST
  • Facebook
  • Twitter
  • Whatsapp

ಬೆಂಗಳೂರು[ಜು. 10]  ಭಾರತ ವಿಶ್ವಕಪ್ ಟೂರ್ನಿಯಿಂದ  ಭಾರವಾದ ಹೆಜ್ಜೆ ಇಟ್ಟು ಹೊರಬಂದಿದೆ. ನ್ಯೂಜಿಲೆಂಡ್ ವಿರುದ್ಧ ನಮ್ಮ ತಂಡ 18 ರನ್ ಗಳಿಂದ ಸೋಲುಕಂಡಿದೆ. ಇದರ ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟ್ರೋಲ್ ಗೆ ಗುರಿಯಾಗಿದ್ದಾರೆ.

ಸಿದ್ದರಾಮಯ್ಯ ಪ್ರಕಾರ, ಈ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಣಿಸಿ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ಹೇಳಿದ್ದರು.  ಆದರೆ ಈಗ ಭಾರತ ಟೂರ್ನಿಯಿಂದ ಹೊರಬಂದಿರುವುದನ್ನು ಒಪ್ಪಿಕೊಳ್ಳಲೇಬೇಕಿದೆ.

ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಭಾರತ

ಜುಲೈ 5 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಆಸ್ಟ್ರೇಲಿಯಾ ತಂಡಕ್ಕಿಂತ ಭಾರತ ಬಲಿಷ್ಠವಾಗಿದೆ. ನಾನು ಹಾಕಿರುವ ಲೆಕ್ಕಾಚಾರದ ಪ್ರಕಾರ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದಿದ್ದರು. ಈಗ ಅದೆ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

Follow Us:
Download App:
  • android
  • ios