ಮುಂಬೈ(ಜು.15): ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಿದ್ದತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಕೆಲ ಬದಲಾವಣೆ ಮಾಡಲು ಮುಂದಾಗಿದೆ. ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವಧಿಯನ್ನು 45 ದಿನಗಳ ಕಾಲ ವಿಸ್ತರಿಸಲಾಗಿದೆ. ಇದೀಗ ನೂತನ ಕೋಚ್ ಆಯ್ಕೆ ಕುರಿತು ಬಿಸಿಸಿಐ ಶೀಘ್ರದಲ್ಲೇ ಅರ್ಜಿ ಅಹ್ವಾನಿಸಲು ಮುಂದಾಗಿದೆ.

ಇದನ್ನೂ ಓದಿ: ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರವಿ ಶಾಸ್ತ್ರಿ ಕೋಚ್ ಆಗಿ ಮುಂದುವರಿಯಲಿದ್ದಾರೆ. ಶಾಸ್ತ್ರಿ ಜೊತೆ ತಂಡದ ಸಹಾಯಕ ಸಿಬ್ಬಂಧಿ ಕೂಡ ಮುಂದುವರಿಯಲಿದ್ದಾರೆ. ಆದರೆ ವಿಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆಯಾಗಲಿದ್ದಾರೆ. ಇದಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಲು ನಿರ್ಧರಿಸಿದೆ. ರವಿ ಶಾಸ್ತ್ರಿ ಮತ್ತೆ 2 ವರ್ಷದ ಅವದಿಗೆ ಕೋಚ್ ಆಗಲು ಅರ್ಜಿ ಭರ್ತಿ ಮಾಡಿ ಬಿಸಿಸಿಐಗೆ ಸಲ್ಲಿಸಬೇಕಿದೆ.

ಇದನ್ನೂ ಓದಿ: ವಿಶ್ವಕಪ್ 2019: ಗರಿಷ್ಠ ರನ್ ಸಿಡಿಸಿದ ಟಾಪ್ 5 ಬ್ಯಾಟ್ಸಮನ್ ಲಿಸ್ಟ್! 

ಸೆಮಿಫೈನಲ್ ಸೋಲಿನ  ಬಳಿಕ ರವಿ ಶಾಸ್ತ್ರಿ ಹಾಗೂ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಶಾಸ್ತ್ರಿ ಮರು ಆಯ್ಕೆ ಕಷ್ಟ ಸಾಧ್ಯ. ಸದ್ಯ ನೂತನ ಕೋಚ್ ಹಾಗೂ ಸಹಾಯ ಸಿಬ್ಬಂಧಿ ಹುಡುಕಾಟದಲ್ಲಿ ಬಿಸಿಸಿಐ ತಲ್ಲೀನವಾಗಿದ್ದು, ಅಧೀಕೃತ ಪ್ರಕಟಣೆ ಹೊರಡಿಸಲಿದೆ.