Asianet Suvarna News Asianet Suvarna News

ಬಿಸಿಸಿಐ ಪ್ರಶ್ನೆಗೆ ತಬ್ಬಿಬ್ಬಾದ ಟೀಂ ಇಂಡಿಯಾ ಆಯ್ಕೆ ಸಮಿತಿ!

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಬಿಸಿಸಿಐ ಗರಂ ಆಗಿದೆ. ಆಯ್ಕೆ ಸಮಿತಿಗೆ ಬಿಸಿಸಿಐ ಹಲವು ಪ್ರಶ್ನೆ ಕೇಳಿದೆ. ಇದೀಗ ಉತ್ತರ ನೀಡಲು MSK ಟೀಂ ಪರದಾಡುತ್ತಿದೆ.
 

BCCI angry on selection committee after team india exit from world cup
Author
Bengaluru, First Published Jul 14, 2019, 5:44 PM IST

World cup Final: ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದ ಸ್ಕೋರ್ ಎಷ್ಟು?

ಮುಂಬೈ(ಜು.14): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲಿನಿಂದ ಬಿಸಿಸಿಐ ಕೆಂಡಾಮಂಡಲವಾಗಿದೆ. ಬಲಿಷ್ಠ ತಂಡವಾಗಿದ್ದರೂ ಫೈನಲ್ ಪ್ರವೇಶಿಸಲು ವಿಫಲವಾಗಿರೋದಕ್ಕೆ ಕಾರಣ ಕೇಳಿದೆ. ಇದರ ಬೆನ್ನಲ್ಲೇ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆ ಇದ್ದರೂ ಸೂಕ್ತ ಆಟಗಾರರನ್ನು ಗುರುತಿಸಿದ ಆಯ್ಕೆ ಸಮಿತಿ ವಿರುದ್ದ ಬಿಸಿಸಿಐ ಗರಂ ಆಗಿದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್!

ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಇದೆ ಎಂದು ತಿಳಿದಿದ್ದರೂ ಸೂಕ್ತ ಆಟಗಾರರನ್ನು ಆಯ್ಕೆ ಮಾಡಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಂಜುರಿಯಾದಾಗ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಯ್ಕೆ ಮಾಡಲಾಯಿತು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿದ್ದ ಕೆಎಲ್ ರಾಹುಲ್‌ಗೆ ಆರಂಭಿಕ ಸ್ಥಾನ ನೀಡಲಾಯಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್ ಇಂಜುರಿಗೆ ತುತ್ತಾದಾಗ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಆಯ್ಕೆ ಮಾಡಲಾಯಿತು. ಈ ರೀತಿ ಗೊಂದಲ ಸೃಷ್ಟಿಸಿದ್ದು ಯಾಕೆ ಎಂದು ಆಯ್ಕೆ ಸಮಿತಿಯನ್ನು ಬಿಸಿಸಿಐ ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕೋಚ್ ರವಿಶಾಸ್ತ್ರಿ ಕಾರಣ..?

ಸೋಲಿನ ಪರಾಮರ್ಶೆ ಬಳಿಕ, ಆಯ್ಕೆ ಸಮಿತಿಗೂ ಮೇಜರ್ ಸರ್ಜರಿ ಮಾಡಲು ಬಿಸಿಸಿಐ ಮುಂದಾಗಿದೆ. ಸದ್ಯ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್, ಸದಸ್ಯರಾದ ದೇವಾಂಗ್ ಗಾಂಧಿ, ಗಗನ್ ಖೋಡಾ, ಜತಿನ್ ಪ್ರಾಂಜಪೆ, ಹಾಗೂ ಸರನ್‌ದೀಪ್ ಸಿಂಗ್ ಕ್ರಿಕೆಟ್ ಅನುಭವ ಅಷ್ಟಕಷ್ಟೆ. ಹೀಗಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಸದಸ್ಯರ ಆಯ್ಕೆಯಲ್ಲೂ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ.

Follow Us:
Download App:
  • android
  • ios