ಓವಲ್(ಜೂ.05): ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿರುವ ಬಾಂಗ್ಲಾದೇಶ ಇದೀಗ ಮತ್ತೊಂದು ಹೋರಾಟಕ್ಕೆ ರೆಡಿಯಾಗಿದೆ. ಇಂದು ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ  ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಬಾಂಗ್ಲಾ ಹಾಗೂ ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಾವಣೆ ಮಾಡಿಲ್ಲ. 

 

 

ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ 10 ವಿಕೆಟ್ ಗೆಲುವು ಸಾಧಿಸಿತ್ತು. ಇದೀಗ ಬಾಂಗ್ಲಾದೇಶ ಮಣಿಸಲು ಸಜ್ಜಾಗಿದೆ. ಇತ್ತ ಬಾಂಗ್ಲಾ, ಸೌತ್ ಆಫ್ರಿಕಾ ವಿರುದ್ದ 21 ರನ್ ರೋಚಕ ಗೆಲವು ಸಾಧಿಸಿದೆ. ವಿಶ್ವಕ್ ಟೂರ್ನಿಯಲ್ಲಿ ಉಭಯ ತಂಡಗಳು ಗೆಲುವಿನ ಆರಂಭ ಪಡೆದಿದೆ. ಇದೀಗ ಸತತ 2ನೇ ಗೆಲವನ್ನು ಎದುರು ನೋಡುತ್ತಿದೆ.