ಬ್ರಿಸ್ಟಲ್‌(ಜೂ.01): ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ವಿಶ್ವಕಪ್‌ ಟೂರ್ನಿ ಹತ್ತಿರವಾಗುತ್ತಿದ್ದಂತೆ ಪ್ರಚಂಡ ಲಯ ಕಂಡುಕೊಂಡು ಟೂರ್ನಿಗೆ ಪ್ರವೇಶಿಸಿದೆ. 6 ತಿಂಗಳ ಹಿಂದೆ ಗೆಲುವಿಗಾಗಿ ಪರದಾಡುತ್ತಿದ್ದ ಆಸ್ಪ್ರೇಲಿಯಾ, ಇತ್ತೀಚೆಗೆ ಭಾರತ ಪ್ರವಾಸದಲ್ಲಿ ಯಶಸ್ಸು ಸಾಧಿಸಿ ಗೆಲುವಿನ ಹಳಿಗೆ ಮರಳಿತು. ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಆತ್ಮವಿಶ್ವಾಸ ವೃದ್ಧಿಸಿಕೊಂಡ ಆಸ್ಪ್ರೇಲಿಯಾ, ಶನಿವಾರ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಎದುರಿಸಲಿದೆ.

ಡೇವಿಡ್‌ ವಾರ್ನರ್‌ ಸಣ್ಣ ಪ್ರಮಾಣದ ಗಾಯಕ್ಕೆ ತುತ್ತಾಗಿದ್ದು ಕೋಚ್‌ ಜಸ್ಟಿನ್‌ ಲ್ಯಾಂಗರ್‌, ವಾರ್ನರ್‌ರನ್ನು ಆಡಿಸುವ ಧೈರ್ಯ ಮಾಡುತ್ತಾರೆಯೇ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಎದುರಿಸಿದ್ದ ಸ್ಟೀವ್‌ ಸ್ಮಿತ್‌ ತಂಡಕ್ಕೆ ವಾಪಸಾಗಿದ್ದು, ಅವರ ಮೇಲೆ ಭಾರಿ ನಿರೀಕ್ಷೆ ಇದೆ.

ಆ್ಯರೋನ್‌ ಫಿಂಚ್‌ ನೇತೃತ್ವದ ತಂಡದಲ್ಲಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಮಿಚೆಲ್‌ ಸ್ಟಾರ್ಕ್, ಪ್ಯಾಟ್‌ ಕಮಿನ್ಸ್‌ರಂತಹ ವಿಶ್ವ ಶ್ರೇಷ್ಠ ವೇಗಿಗಳ ಬಲವೂ ಆಸ್ಪ್ರೇಲಿಯಾಕ್ಕಿದೆ. ಆಫ್ಘಾಸ್ತಾನ ವಿರುದ್ಧ ದೊಡ್ಡ ಗೆಲುವು ಗಳಿಸಿ ಉತ್ತಮ ನೆಟ್‌ ರನ್‌ರೇಟ್‌ ಸಂಪಾದಿಸುವುದು ಆಸೀಸ್‌ ಗುರಿಯಾಗಿದೆ.

ಆಫ್ಘನ್‌ಗೆ ಅಸಲಿ ಚಾಲೆಂಜ್‌: ದೊಡ್ಡ ತಂಡಗಳಿಗೆ ಆಘಾತ ನೀಡುವ ಸಾಮರ್ಥ್ಯ ಹೊಂದಿದ್ದರೂ, ಆಫ್ಘಾನಿಸ್ತಾನ ದೊಡ್ಡ ವೇದಿಕೆಯಲ್ಲಿ ಒತ್ತಡ ನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕಿದೆ. ತಂಡದ ಬ್ಯಾಟ್ಸ್‌ಮನ್‌ಗಳು ಟಿ20ಯಷ್ಟು ಪರಿಣಾಮಕಾರಿ ಆಟವನ್ನು ಏಕದಿನದಲ್ಲಿ ಆಡಲು ಸಾಧ್ಯವಾಗದಿರುವುದು ಆಫ್ಘನ್‌ ಹಿನ್ನಡೆ ಅನುಭವಿಸಲು ಕಾರಣವಾಗಿದೆ. ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಮೇಲೆ ಎಲ್ಲರ ಕಣ್ಣಿದೆ.

ಪಿಚ್‌ ರಿಪೋರ್ಟ್‌

ಇಲ್ಲಿನ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿದ್ದು, ಇತ್ತೀಚೆಗೆ ನಡೆದ ಇಂಗ್ಲೆಂಡ್‌-ಪಾಕಿಸ್ತಾನ ಪಂದ್ಯದಲ್ಲಿ ಸುಮಾರು 720 ರನ್‌ ದಾಖಲಾಗಿತ್ತು. 359 ರನ್‌ ಗುರಿಯನ್ನು ಇಂಗ್ಲೆಂಡ್‌ 31 ಎಸೆತ ಬಾಕಿ ಇರುವಂತೆ ತಲುಪಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.

ವಿಶ್ವಕಪ್‌ನಲ್ಲಿ ಆಸೀಸ್‌ vs ಆಫ್ಘನ್‌

ಪಂದ್ಯ: 01

ಆಸ್ಪ್ರೇಲಿಯಾ: 01

ಆಫ್ಘಾನಿಸ್ತಾನ: 00

ಸಂಭವನೀಯ ಆಟಗಾರರ ಪಟ್ಟಿ

ಆಸ್ಪ್ರೇಲಿಯಾ: ವಾರ್ನರ್‌, ಖವಾಜ, ಸ್ಮಿತ್‌, ಫಿಂಚ್‌ (ನಾಯಕ), ಸ್ಟೋಯ್ನಿಸ್‌, ಮ್ಯಾಕ್ಸ್‌ವೆಲ್‌, ಕಾರ್ರಿ, ಕಮಿನ್ಸ್‌, ಬೆರ್ಹೆನ್‌ಡೊಫ್‌ರ್‍, ಸ್ಟಾರ್ಕ್, ಜಂಪಾ.

ಆಫ್ಘಾನಿಸ್ತಾನ: ಶಹಜಾದ್‌, ಹಜರತ್ತುಲ್ಲಾ, ರಹಮತ್‌, ಹಶ್ಮತ್ತುಲ್ಲಾ, ಅಸ್ಗರ್‌, ನಬಿ, ಗುಲ್ಬದಿನ್‌ (ನಾಯಕ), ರಶೀದ್‌, ದವ್ಲತ್‌, ಹಮೀದ್‌, ಮುಜೀಬ್‌.

ಪಂದ್ಯ ಆರಂಭ: ಸಂಜೆ 6ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...