ಸೌಥಾಂಪ್ಟನ್(ಜೂ.05): ವಿಶ್ವಕಪ್ ಟೂರ್ನಿಯಲ್ಲಿಂದು ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ. ಸೌತ್ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ ವಿಶ್ವಕಪ್ ಹೋರಾಟ ಆರಂಭಿಸುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ  ಸೌತ್ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

 

 

ಐಪಿಎಲ್ ಟೂರ್ನಿ ಬಳಿಕ ಕೆಲ ದಿನಗಳ ವಿಶ್ರಾಂತಿ ಪಡೆದ ಟೀಂ ಇಂಡಿಯಾ ಇದೀಗ ಸೌತ್ಆಫ್ರಿಕಾ ಪಂದ್ಯಕ್ಕೆ ರೆಡಿಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಹರಿಣಗಳಿಗೆ ಸೋಲುಣಿಸಿ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸೋ ವಿಶ್ವಾಸದಲ್ಲಿದೆ. ಸತತ 2 ಪಂದ್ಯ ಸೋತಿರುವ ಸೌತ್ ಆಫ್ರಿಕಾ ಇದೀಗ ಟೀಂ ಇಂಡಿಯಾ ವಿರುದ್ಧ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದೆ.