ಕಾರ್ಡಿಫ್(ಜೂ.04): ವಿಶ್ವಕಪ್ ಟೂರ್ನಿ 7ನೇ ಲೀಗ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ ರೋಚಕ ಪಂದ್ಯ ಅಭಿಮಾನಿಗಳನ್ನು ರಂಜಿಸಿತ್ತು. ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ದೀಢೀರ್ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ತಂಡಕ್ಕೆ ಕುಸಾಲ್ ಪರೇರಾ ಏಕಾಂಗಿ ಹೋರಾಟ ನೀಡಿದರು. ಆದರೆ ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಅಫ್ಗಾನ್ ದಾಳಿಗೆ ಕುಸಿದ ಶ್ರೀಲಂಕಾ ಪೆವಿಲಿಯನ್ ಪರೇಡ್ ನಡೆಸಿತು. ಕುಲಾಸ್ ಪರೇರಾ 78 ರನ್ ಹೊರತು ಪಡಿಸಿದರೆ ಇತರ ಯಾರು ಕೂಡ ಅಬ್ಬರಿಸಿಲ್ಲ. 33 ಓವರ್‌ಗಳಿಗೆ 8 ವಿಕೆಟ್ ಕಳೆದುಕೊಂಡ ಶ್ರೀಲಂಕಾ 182 ರನ್ ಸಿಡಿಸಿತು.

ಅಷ್ಟರಲ್ಲೇ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳಿಸಲಾಗಿದೆ. ಸದ್ಯ ಮಳೆ ಸುರಿಯುತ್ತಿರುವುದರಿಂದ ಪಂದ್ಯ ಆರಂಭ ವಿಳಂಭವಾಗುವ ಸಾಧ್ಯತೆ ಇದೆ. ಸದ್ಯ ಅಫ್ಘಾನ್ ಪಂದ್ಯದಲ್ಲಿ ಮೇಲಗೈ ಸಾಧಿಸಿದ್ದು, ಶ್ರೀಲಂಕಾ ಸಂಕಷ್ಟದಲ್ಲಿದೆ.