ನಾಟಿಂಗ್‌ಹ್ಯಾಮ್(ಜೂ.03):  ವಿಶ್ವಕಪ್ ಟೂರ್ನಿಯ 6ನೇ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಅಬ್ಬರಿಸಿದೆ. ಟಾಪ್ ಆರ್ಡರ್ ಹಾಗೂ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ಅದ್ಬುತ ಪ್ರದರ್ಶನದ ಮೂಲಕ ಪಾಕಿಸ್ತಾನ, ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.   ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 348 ರನ್ ಸಿಡಿಸಿದೆ. ಈ ಮೂಲಕ ಇಂಗ್ಲೆಂಡ್‌ಗೆ 349 ರನ್ ಟಾರ್ಗೆಟ್ ನೀಡಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ತಂಡಕ್ಕೆ ಇಮಾಮ್ ಉಲ್ ಹಕ್ ಹಾಗೂ ಫಕರ್ ಝಮಾನ್ 82 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಆರಂಭದಲ್ಲೇ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದರು. ಫಕಾರ್ 36 ರನ್ ಸಿಡಿಸಿ ಔಟಾದರೆ, ಇಮಾಮ್ 44 ರನ್ ಸಿಡಿಸಿ ಔಟಾದರು.

ಬಾಬರ್ ಅಜಮ್ ಹಾಗೂ ಮೊಹಮ್ಮದ್ ಹಫೀಜ್ ಜೊತೆಯಾಟದಿಂದ ಪಾಕ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟುತು. ಬಾಬರ್ ಹಾಗೂ ಹಫೀಜ್ ತಲಾ ಅರ್ಧಶತಕ ಸಿಡಿಸಿ ಆಸರೆಯಾದರು. ಬಾಬರ್ 63 ರನ್ ಕಾಣಿಕೆ ನೀಡಿದರೆ, ಹಫೀಜ್ 84 ರನ್ ಸಿಡಿಸಿ ಔಟಾದರು. ಆಸಿಫ್ ಆಲಿ 14 ರನ್ ಸಿಡಿಸಿ ಔಟಾದರು. ಆದರೆ ನಾಯಕ ಸರ್ಫರಾಜ್ ಅಹಮ್ಮದ್ ಹಾಫ್ ಸೆಂಚುರಿ ಸಿಡಿಸಿದರು. ಸರ್ಫರಾಜ್ 55 ರನ್ ಸಿಡಿಸಿ ಔಟಾದರೆ, ಶೋಯೆಬ್ ಮಲ್ಲಿಕ್ ಕೇವಲ 8 ರನ್ ಸಿಡಿಸಿ ಔಟಾದರು.  ಈ ಮೂಲಕ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 348 ರನ್ ಸಿಡಿಸಿತು.