ಓವಲ್(ಜೂ.09): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್.ಧೋನಿ ಕೀಪಿಂಗ್ ಗ್ಲೌಸ್ ಭಾರಿ ಸದ್ದು ಮಾಡಿತ್ತು. ಮೊದಲ ಪಂದ್ಯದಲ್ಲಿ ಧೋನಿ ಗ್ಲೌಸ್‌ನಲ್ಲಿ ಭಾರತಿಯ ಸೇನೆಯ ಬಲಿದಾನದ ಚಿಹ್ನೆ ಬಳಸಿದ್ದರು. ಈ ಮೂಲಕ ಸೇನೆಗೆ ಗೌರವ ಸೂಚಿಸಿದ್ದರು. ಆದರೆ ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ ಚಿಹ್ನೆ ತೆಗೆಯಲು ಸೂಚಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಸೇನಾ ಚಿಹ್ನೆ ಇಲ್ಲದ ಗ್ಲೌಸ್ ಬಳಸಿದ್ದಾರೆ.

ಧೋನಿ ಗ್ಲೌಸ್ ಮೇಲಿನ ಚಿಹ್ನೆಗೆ ಬಿಸಿಸಿಐ ಸೇರಿದಂತೆ ಭಾರತೀಯ ಕ್ರಿಕೆಟ್ ದಿಗ್ಗಜರು ಬೆಂಬಲ ಸೂಚಿಸಿದ್ದರು. ಧೋನಿ ಗ್ಲೌಸ್‌ನಿಂದ ಬಲಿದಾನ ಚಿಹ್ನೆ ತೆಗೆಯಬೇಕಿಲ್ಲ ಎಂದು ಸಾಮಾಜಿಕ ಜಾಲತಾಣಧಲ್ಲಿ ಅಭಿಯಾನ ಆರಂಭಿಸಿದ್ದರು. ಇತ್ತ ಬಿಸಿಸಿಐ ಬಲಿದಾನ ಚಿಹ್ನೆಗೆ ಅನುಮತಿ ನೀಡಲು ಐಸಿಸಿಗೆ ಪತ್ರ ಬರೆದು ಮನವಿ ಮಾಡಿತ್ತು. ಆದರೆ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು.

ಮನವಿ ತಿರಸ್ಕರಿಸಿದ ಕಾರಣ ಧೋನಿ, ಮತ್ಮ ಬಲಿದಾನ ಚಿಹ್ನೆ ಇಲ್ಲದ ಗ್ಲೌಸ್ ಬಳಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಗ್ಲೌಸ್ ಮೇಲೆ ಎಲ್ಲರ ಚಿತ್ತ ನೆಟ್ಟಿತು.