ಬ್ರಿಸ್ಟಾಲ್[ಜೂ.01]: ಆರಂಭಿಕ ಆಘಾತದ ಹೊರತಾಗಿಯೂ ರೆಹಮತ್ ಶಾ[43] ಸಮಯೋಚಿತ ಬ್ಯಾಟಿಂಗ್ ಹಾಗೂ ನಜೀಬುಲ್ಲಾ ಜರ್ದಾನ್[51] ಆಕರ್ಷಕ ಅರ್ಧಶತಕದ ನೆರವಿನಿಂದ ಆಫ್ಘಾನಿಸ್ತಾನ 207 ರನ್ ಬಾರಿಸಿದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ರೆಹಮತ್ ಶಾ-ಹಸ್ಮತುಲ್ಲಾ ಶಾಹಿದಿ 51 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದ ಶಾಹಿದಿ[18] ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಜಂಪಾ ಬೌಲಿಂಗ್‌ನಲ್ಲಿ ಸ್ಟಂಪೌಟ್ ಆದರು. ಇನ್ನು ಆಲ್ರೌಂಡರ್ ನಬೀ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಉತ್ತಮವಾಗಿ ಆಡುತ್ತಿದ್ದ ರೆಹಮತ್ ಶಾ 43 ರನ್ ಬಾರಿಸಿ ಜಂಪಾಗೆ ಎರಡನೇ ಬಲಿ ಆದರು. ಈ ವೇಳೆ ಆಫ್ಘಾನಿಸ್ತಾನ 20.2 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು.

ಆಸರೆಯಾದ ಜರ್ದಾನ್-ನೈಬ್: 6ನೇ ವಿಕೆಟ್‌ಗೆ ನಾಯಕ ಗುಲ್ಬದ್ದೀನ್ ನೈಬ್ ಹಾಗೂ ನಜೀಬುಲ್ಲಾ ಜರ್ದಾನ್ ಜೋಡಿ ಆಸಿಸ್ ಬೌಲರ್’ಗಳನ್ನು ದಿಟ್ಟವಾಗಿ ಎದುರಿಸುವುದರ ಮೂಲಕ 83 ರನ್ ಗಳ ಜತೆಯಾಟವಾಡಿತು. ನಾಯಕ ನೈಬ್ 33 ಎಸೆತಗಳಲ್ಲಿ 31 ರನ್ ಬಾರಿಸಿದರೆ, ನಜೀಬುಲ್ಲಾ ಜರ್ದಾನ್ ಕೇವಲ 49 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಸಹಿತ 51 ರನ್ ಬಾರಿಸಿದರು. ಈ ಇಬ್ಬರು ಅಂತಿಮವಾಗಿ ಮಾರ್ಕಸ್ ಸ್ಟೋನಿಸ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಶೀದ್ ಖಾನ್[27], ಮುಜೀಬ್ ಉರ್ ರೆಹಮಾನ್ ತಂಡದ ಮೊತ್ತವನ್ನು ಇನ್ನೂರರ ಗಡಿ ಡಾಟಿಸುವಲ್ಲಿ ಯಶಸ್ವಿಯಾದರು. 

ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೋನಿಸ್ 2 ಹಾಗೂ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಆಫ್ಘಾನಿಸ್ತಾನ: 207/10
ನಜೀಬುಲ್ಲಾ ಜರ್ದಾನ್: 51
ಪ್ಯಾಟ್ ಕಮ್ಮಿನ್ಸ್: 40/3
[* ವಿವರ ಅಪೂರ್ಣ]