ಲಂಡನ್‌(ಜೂ.05): ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ, ಬುಧವಾರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 21 ರನ್‌ಗಳಿಂದ ಸೋಲಿಸಿತ್ತು. ಶ್ರೀಲಂಕಾವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ಕಿವೀಸ್‌, 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿತ್ತು.

ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ vs ಬಾಂಗ್ಲಾ

ಪಂದ್ಯ: 04

ನ್ಯೂಜಿಲೆಂಡ್‌: 04

ಬಾಂಗ್ಲಾದೇಶ: 00

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಗಪ್ಟಿಲ್‌, ಮನ್ರೊ, ವಿಲಿಯಮ್ಸನ್‌ (ನಾಯಕ), ಟೇಲರ್‌, ಲೇಥಮ್‌, ನೀಶಮ್‌, ಡಿ ಗ್ರಾಂಡ್‌ಹೋಮ್‌, ಸ್ಯಾಂಟ್ನರ್‌, ಹೆನ್ರಿ, ಫಗ್ರ್ಯೂಸನ್‌, ಬೌಲ್ಟ್‌.

ಬಾಂಗ್ಲಾದೇಶ: ತಮೀಮ್‌, ಸರ್ಕಾರ್‌, ಶಕೀಬ್‌, ಮುಷ್ಫಿಕುರ್‌, ಮಿಥುನ್‌, ಮಹಮದ್ದುಲ್ಲಾ, ಮೊಸಾದೆಕ್‌, ಮೆಹಿದಿ, ಸೈಫುದ್ದೀನ್‌, ಮೊರ್ತಜಾ(ನಾಯಕ), ಮುಸ್ತಾಫಿಜುರ್‌.

ಸ್ಥಳ: ಲಂಡನ್‌
ಪಂದ್ಯ ಆರಂಭ: ಸಂಜೆ 6ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...