ಸೌಥಾಂಪ್ಟನ್(ಜೂ.06): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೊದಲ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧ ಶುಭಾರಂಭ ಮಾಡಿದ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ದದ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಸೌತ್ ಆಫ್ರಿಕಾ ವಿರುದ್ಧದ ಗೆಲುವಿನ ಬಳಿಕ ಪಂದ್ಯಶ್ರೇಷ್ಠ ರೋಹಿತ್ ಶರ್ಮಾ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ: ಛೇ, ಎಬಿಡಿಗೆ ಹೀಗಾಗಬಾರದಿತ್ತು...!

ಸೌತ್ಆಫ್ರಿಕಾ ವಿರುದ್ದ ಶತಕ ಸಿಡಿಸಿ ಗೆಲುವಿನ ರೂವಾರಿಯಾದ ರೋಹಿತ್ ಶರ್ಮಾ, ತಂಡದ ಪ್ರದರ್ಶನದ ಕುರಿತು ಮಾತನಾಡಿದ್ದಾರೆ. ಒಬ್ಬರು, ಇಬ್ಬರ ಮೇಲೆ ತಂಡ ಅವಲಂಬಿತವಾಗಬಾರದು. ಪ್ರತಿಯೊಬ್ಬ ಆಟಾಗರ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್!

ಕಳೆದ ಎರಡು ವರ್ಷದಿಂದ ಟೀಂ ಇಂಡಿಯಾ ಪ್ರತಿಯೊಬ್ಬ ಆಟಗಾರನೂ ಗೆಲುವಿನಲ್ಲಿ ನೆರವಾಗಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಇದೇ ಪ್ರದರ್ಶನ ಮುಂದುವರಿಸಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗೆಲುವು ಸಾಧಿಸಿದೆ.