ಬ್ರಿಸ್ಟಲ್(ಜೂ.07): ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಇನ್ನೇನು ಟಾಸ್ ಪ್ರಕ್ರಿಯೆ ಆರಂಭವಾಗಬೇಕು ಅನ್ನುಷ್ಟರಲ್ಲೇ ಮಳೆ ಅಡ್ಡಿಯಾಗಿದೆ. ಹೀಗಾಗಿ ಟಾಸ್ ವಿಳಂಬವಾಗಲಿದೆ. ಶ್ರೀಲಂಕಾ ಹಾಗೂ  ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯವನ್ನು 41 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇದೀಗ ಈ ಪಂದ್ಯ ಆರಂಭಕ್ಕೂ ಮೊದಲೇ ಮಳೆ ಅಡ್ಡಿಯಾಗಿದೆ. ಹೆಚ್ಚು ಸಮಯ ವ್ಯರ್ಥವಾದಲ್ಲಿ ಈ ಪಂದ್ಯದ ಓವರ್ ಕೂಡ ಕಡಿತಗೊಳಿಸುವ ಸಾಧ್ಯತೆ ಇದೆ.

 

 

ಪಾಕಿಸ್ತಾನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಅನುಭವಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಸೋಲಿಸಿ ಕಮ್‌ಬ್ಯಾಕ್ ಮಾಡಿದೆ. ಇತ್ತ ನ್ಯೂಜಿಲೆಂಡ್ ವಿರುದ್ದ ಸೋಲು ಅನುಭವಿಸೋ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ, 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ದ ತಿಣುಕಾಡಿ ಗೆದ್ದಿತ್ತು.