ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಲಂಕಾ ತಂಡವು ಕಿವೀಸ್‌ಗೆ ಶಾಕ್ ಕೊಡಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಕಾರ್ಡಿಫ್[ಜೂ.01]: ಹಾಲಿ ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದರು ನೋಡುತ್ತಿದ್ದು ಇಂದು ಶ್ರೀಲಂಕಾ ತಂಡವನ್ನು ಎದರಿಸಲು ಸಜ್ಜಾಗಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಭಾರತ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಿವೀಸ್ ಪಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ಮೇಲೆ ಸವಾರಿ ಮಾಡಲು ಮುಂದಾಗಿದೆ. ಕಳೆದ ವರ್ಷ ಲಂಕಾ ಸತತ 9 ಸೋಲುಗಳನ್ನು ಕಂಡ ಬಳಿಕ ಸ್ಕಾಟ್’ಲ್ಯಾಂಡ್ ವಿರುದ್ಧ ಗೆದ್ದು ನಿಟ್ಟುಸಿರುಬಿಟ್ಟಿತ್ತು.
Scroll to load tweet…
ನ್ಯೂಜಿಲೆಂಡ್ ತಂಡವು ಓರ್ವ ಸ್ಪಿನ್ನರ್ ಹಾಗೂ ಇಬ್ಬರು ಆಲ್ರೌಂಡರ್’ನೊಂದಿಗೆ ಕಣಕ್ಕಿಳಿದಿದೆ. ಇನ್ನು ಲಂಕಾ ತಂಡವು ಸಮತೋಲಿತ ತಂಡದೊಂದಿಗೆ ಕಣಕ್ಕಿಳಿದಿದೆ.
ತಂಡಗಳು ಹೀಗಿವೆ:
ನ್ಯೂಜಿಲೆಂಡ್:
Scroll to load tweet…
ಶ್ರೀಲಂಕಾ:
Scroll to load tweet…
