ದುಬೈ(ಜೂ.06): ಐಸಿಸಿ ಟೂರ್ನಿ ಲೀಗ್ ಪಂದ್ಯಗಳು ರೋಚಕತೆ ಹೆಚ್ಚಿಸುತ್ತಿದೆ. ಟೀಂ ಇಂಡಿಯಾ ಕೂಡ ಮೊದಲ ಪಂದ್ಯ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸೌತ್ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಐಸಿಸಿ ವಿರಾಟ್ ಕೊಹ್ಲಿ ಫೋಟೋ ಪೋಸ್ಟ್ ಮಾಡಿತ್ತು. ರಾಜನಂತೆ ಚಿತ್ರಿಸಿರುವ ಫೋಟೋ ಹಾಕಿದ ಐಸಿಸಿಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಪ್ರಶ್ನಿಸಿದ್ದರು. ಇದೀಗ ಐಸಿಸಿ ತಕ್ಕ ತಿರುಗೇಟು ನೀಡಿದೆ.

 

 

ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಎದುರಿಸಲು ಬ್ಯಾಟ್ಸ್‌ಮನ್‌ಗೆ ಪೀಟರ್ಸನ್ ಟಿಪ್ಸ್

ನಾಯಕ ವಿರಾಟ್ ಕೊಹ್ಲಿ ಫೋಟೋ ಯಾಕೆ ಹಾಕಿದ್ದೀರಿ, ಇದು ಪಕ್ಷಪಾತ ನಿರ್ಣಯ ಎಂದು ಮೈಕಲ್ ವಾನ್ ಐಸಿಸಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ, ಏಕದಿನ ಹಾಗೂ  ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಎಂದು ಪ್ರತಿಕ್ರಿಯೆ ನೀಡಿದೆ. 

 

 

ಇದನ್ನೂ ಓದಿ: ವಿಶ್ವಕಪ್ 2019: ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್!

ನಂಬರ್ 1 ಬ್ಯಾಟ್ಸ್‌ಮನ್ ಫೋಟೋ ಹಾಕಿದ್ದೇವೆ. ಇದರಲ್ಲಿ ಪಕ್ಷಪಾತವಿಲ್ಲ ಎಂದು ಪರೋಕ್ಷವಾಗಿ ವಾನ್‌ಗೆ ತಿರುಗೇಟು ನೀಡಿದೆ. ಐಸಿಸಿ ತಿರುಗೇಟಿಗೆ ಟ್ವಿಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಚ್ಚುಕಟ್ಟಾದ ಪ್ರತಿಕ್ರಿಯೆ ಎಂದು ಪ್ರಶಂಸಿದ್ದಾರೆ.