ನವದೆಹಲಿ(ಜೂ.06): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೌತ್ಆಫ್ರಿಕಾ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ ಪ್ರತಿಷ್ಠಿತ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಭಾರತದ ಗೆಲುವಿಗೆ ಕೇಂದ್ರ ಗೃಹ ಸಚಿವ, ರಕ್ಷಣಾ ಸಚಿವ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಬಳಗ ಅಭಿನಂದಿಸಿದೆ.

ಇದನ್ನೂ ಓದಿ:ಜಸ್ಪ್ರೀತ್ ಬುಮ್ರಾ ಎದುರಿಸಲು ಬ್ಯಾಟ್ಸ್‌ಮನ್‌ಗೆ ಪೀಟರ್ಸನ್ ಟಿಪ್ಸ್

ಟೀಂ ಇಂಡಿಯಾ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಶುಭಾಶಯ ಕೋರಿದ್ದರು. ಸಂಪೂರ್ಣ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಶುಭಹಾರೈಸಿದ್ದರು. ಸೌತ್ಆಫ್ರಿಕಾ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಗೃಹ ಮಂತ್ರಿ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಮಾಜಿ ಕ್ರೀಡಾ ಸಚಿವ ರಾಜ್ಯವರ್ದನ್ ಸಿಂಗ್ ರಾಥೋಡ್ ಸಿಂಗ್ ಸೇರಿದಂತೆ ಮೋದಿ ಬಳಗ ಟೀಂ ಇಂಡಿಯಾಗೆ ಶುಭಾಶಯ ಕೋರಿದೆ.