ಬ್ರಿಸ್ಟೋಲ್[ಜೂ.01]: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘನ್ ನಾಯಕ ಗುಲ್ಬದಿನ್‌ ನೈಬ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ಆಫ್ಘಾನಿಸ್ತಾನ ಮೊದಲೆರಡು ಓವರ್’ಗಳಲ್ಲೇ 2 ಮೊಹಮ್ಮದ್ ಶೆಹಜಾದ್, ಹಶ್ಮತ್ತುಲ್ಲಾ ಝಜೈ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೊದಲ ಓವರ್’ನಲ್ಲೇ ಮಿಚೆಲ್ ಸ್ಟಾರ್ಕ್ ಕರಾರುವಕ್ಕಾದ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಶೆಹಜಾದ್ ಪೆವಿಲಿಯನ್ ಹಾದಿ ಹಿಡಿದರೆ. ಎರಡನೇ ಓವರ್’ನಲ್ಲಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ಝಜೈ ವಿಕೆಟ್ ಒಪ್ಪಿಸಿದರು.

ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಫ್ಘಾನಿಸ್ತಾನ ಇದೀಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೂ ಅಂತಹದ್ದೇ ಪ್ರದರ್ಶನ ತೋರುವ ಕನವರಿಕೆಯಲ್ಲಿದೆ. ಇನ್ನು ಬಾಲ್ ಟ್ಯಾಂಪರಿಂಗ್ ನಿಷೇಧದ ಬಳಿಕ ತಂಡ ಕೂಡಿಕೊಂಡಿರುವ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.  

ತಂಡಗಳು ಹೀಗಿವೆ:

ಆಸ್ಟ್ರೇಲಿಯಾ:

ಆಫ್ಘಾನಿಸ್ತಾನ: