Pro Kabaddi League : ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ

* ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟಾನ್ ತಂಡಕ್ಕೆ ಹ್ಯಾಟ್ರಿಕ್ ಜಯ

* ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದ ಪಲ್ಟಾನ್ ತಂಡ

* ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಪ್ರದೀಪ್ ನರ್ವಾಲ್

 

Pro Kabaddi League Puneri Paltan register hat trick victory in the tournament kvn

ಬೆಂಗಳೂರು(ಜ.28): 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಪುಣೇರಿ ಪಲ್ಟನ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು, ಒಟ್ಟು 7 ಜಯದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಗುರುವಾರ ನಡೆದ ಯು.ಪಿ.ಯೋಧಾ (UP Yoddha) ವಿರುದ್ಧದ ಪಂದ್ಯದಲ್ಲಿ ಪುಣೆ 44-38 ಅಂಕಗಳಿಂದ ಗೆದ್ದಿತು. ಸತತ 2ನೇ ಸೋಲುಂಡ ಯೋಧಾ ಸದ್ಯ 7ನೇ ಸ್ಥಾನದಲ್ಲಿದೆ. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಪುಣೆ ಮೊದಲಾರ್ಧಕ್ಕೆ 21-18 ಅಂಕಗಳಿಂದ ಮುಂದಿತ್ತು. ಮೋಹಿತ್‌ ಗೋಯತ್‌ 14, ಅಸ್ಲಂ 9 ರೈಡ್‌ ಅಂಕ ಗಳಿಸಿದರು. ಯೋಧಾದ ತಾರಾ ರೈಡರ್‌ ಪ್ರದೀಪ್‌ ನರ್ವಾಲ್‌(06 ಅಂಕ) ಮತ್ತೊಮ್ಮೆ ವಿಫಲರಾದರು. ಸುರೇಂದ್ರ ಗಿಲ್‌(16)ಏಕಾಂಗಿ ಹೋರಾಟ ವ್ಯರ್ಥವಾಯಿತು.

ಸದ್ಯ ಬೆಂಗಳೂರು ಬುಲ್ಸ್ (Bengaluru Bulls) ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ, ಹರ್ಯಾಣ ಸ್ಟೀಲರ್ಸ್ ಹಾಗೂ ಯು ಮುಂಬಾ ಮೊದಲ ನಾಲ್ಕರೊಳಗೆ ಸ್ಥಾನ ಪಡೆದಿವೆ. ಇನ್ನು ಟೂರ್ನಿಯಲ್ಲಿ ಕೇವಲ ಒಂದು ಗೆಲುವು ದಾಖಲಿಸಿರುವ ತೆಲುಗು ಟೈಟಾನ್ಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ.

ಇಂದಿನ ಪಂದ್ಯ: ತಲೈವಾಸ್‌-ಪಾಟ್ನಾ
ಸಮಯ: ಸಂಜೆ 7.30ಕ್ಕೆ

ಏಷ್ಯಾಕಪ್‌ ಹಾಕಿ: ಇಂದು ಕಂಚಿಗೆ ಭಾರತ ಸೆಣಸು

ಮಸ್ಕಟ್‌: ಏಷ್ಯಾ ಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ (Asia Cup Women's Hockey Tournamnet) ಪ್ರಶಸ್ತಿ ಉಳಿಕೊಳ್ಳಲು ವಿಫಲವಾಗಿರುವ ಭಾರತ, ಶುಕ್ರವಾರ ಕಂಚಿನ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದಲ್ಲಿ ಮಲೇಷ್ಯಾ ಹಾಗೂ ಸಿಂಗಾಪುರದ ವಿರುದ್ಧ ಭರ್ಜರಿಯಾಗಿ ಗೆದ್ದು, ಜಪಾನ್‌ ವಿರುದ್ಧ ಸೋತಿದ್ದ ಭಾರತ, ಸೆಮೀಸ್‌ನಲ್ಲಿ ದ.ಕೊರಿಯಾಗೆ 2-3 ಗೋಲುಗಳ ಅಂತರದಲ್ಲಿ ಶರಣಾಗಿತ್ತು. 

RIP Charanjit Singh ಹಾಕಿ ದಿಗ್ಗಜ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ನಾಯಕ ಚರಣಜಿತ್ ಸಿಂಗ್ ನಿಧನ!

ಮತ್ತೊಂದು ಸೆಮೀಸ್‌ನಲ್ಲಿ ಚೀನಾ, ಜಪಾನ್‌ ವಿರುದ್ಧ ಸೋಲನುಭವಿಸಿತ್ತು. ಕಳೆದ ಆವೃತ್ತಿಯ ಫೈನಲ್‌ನ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಗೆದ್ದಿದ್ದ ಭಾರತ, ಈ ಬಾರಿ ಮತ್ತೊಮ್ಮೆ ಚೀನಾವನ್ನು ಸೋಲಿಸಿ 3ನೇ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ. ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಜಪಾನ್‌-ದ.ಕೊರಿಯಾ ಮುಖಾಮುಖಿಯಾಗಲಿವೆ.

ಕೋವಿಡ್‌: ಸಂತೋಷ್‌ ಟ್ರೋಫಿ ಮುಂದೂಡಿಕೆ

ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು (Coronavirus) ನಿಯಂತ್ರಣಕ್ಕೆ ಬರದ ಕಾರಣ ಫೆ.20ರಿಂದ ಮಾ.6ರ ವರೆಗೂ ಕೇರಳದ ಮಲ್ಲಪುರಂನಲ್ಲಿ ನಡೆಯಬೇಕಿದ್ದ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯನ್ನು (Santosh Trophy Football Tournament) ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಅನಿರ್ದಿಷ್ಟಅವಧಿಗೆ ಮುಂದೂಡಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಎಐಎಫ್‌ಎಫ್‌ ತಿಳಿಸಿದೆ.

ಏಷ್ಯನ್‌ ಕಪ್‌ನಿಂದ ಭಾರತ ಹೊರಬೀಳಲು ಎಎಫ್‌ಸಿ ಕಾರಣ: ಕೋಚ್‌

ಮುಂಬೈ: ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಿಂದ (Asian Cup Football Tournament) ಭಾರತ ಮಹಿಳಾ ತಂಡ ಹೊರಬೀಳಲು ಏಷ್ಯನ್‌ ಫುಟ್ಬಾಲ್‌ ಕಾನ್ಫೆಡರೇಷನ್‌(ಎಎಫ್‌ಸಿ)ನ ನಿರ್ಲಕ್ಷ್ಯವೇ ಕಾರಣ ಎಂದು ತಂಡದ ಕೋಚ್‌ ಥಾಮಸ್‌ ಡೆನೆರ್ಬಿ ಆರೋಪಿಸಿದ್ದಾರೆ. ತಂಡದ 12ಕ್ಕೂ ಹೆಚ್ಚು ಆಟಗಾರ್ತಿಯರಲ್ಲಿ ಕೊರೋನಾ ಸೋಂಕು ಪತ್ತೆಯಾದ ಕಾರಣ, ಭಾರತ ಟೂರ್ನಿಯಿಂದ ಹೊರನಡೆಯಬೇಕಾಯಿತು.

Australian Open : ಫೈನಲ್‌ಗೆ ಆ್ಯಶ್ಲೆ ಬಾರ್ಟಿ, ಡೇನಿಯಲ್‌ ಕಾಲಿನ್ಸ್‌

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡೆನೆರ್ಬಿ, ‘ತಂಡ ಉಳಿದುಕೊಂಡಿದ್ದ ಹೋಟೆಲ್‌ ಸಿಬ್ಬಂದಿಗೆ ಜ.17ರಂದು ಪರೀಕ್ಷೆ ನಡೆಸಲಾಗಿತ್ತು. ಜ.18ಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟರೂ ಜ.19ರ ಮಧ್ಯಾಹ್ನದ ವರೆಗೂ ವಿಷಯ ಬಹಿರಂಗಪಡಿಸಿರಲಿಲ್ಲ. ಹೋಟೆಲ್‌ ಸಿಬ್ಬಂದಿಯಿಂದಲೇ ನಮ್ಮ ಆಟಗಾರ್ತಿಯರಿಗೆ ಸೋಂಕು ತಗುಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ದುರ್ಬಲ ಬಯೋಬಬಲ್‌ ವ್ಯವಸ್ಥೆ, ನಿರ್ಲಕ್ಷ್ಯವೇ ನಾವು ಹೊರಬೀಳಲು ಕಾರಣ’ ಎಂದು ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios