ಕಳೆದ ಫೆಬ್ರವರಿಯಲ್ಲಿ ಯುವತಿಯೊಬ್ಬಳು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಭಾರತದ ತಾರಾ ಹಾಕಿ ಆಟಗಾರ ವರುಣ್‌ ವಿರುದ್ಧ ಬೆಂಗಳೂರು ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದರು.

ನವದೆಹಲಿ: ಪೋಕ್ಸೋ ಕೇಸ್‌ನಲ್ಲಿ ಖುಲಾಸೆಗೊಂಡಿರುವ ತಾರಾ ಹಾಕಿ ಆಟಗಾರ ವರುಣ್‌ ಕುಮಾರ್‌ ಭಾರತ ತಂಡಕ್ಕೆ ಮರಳಿದ್ದಾರೆ. ಅ.23 ಹಾಗೂ 24ರಂದು ವಿಶ್ವ ಚಾಂಪಿಯನ್‌ ಜರ್ಮನಿ ವಿರುದ್ಧ ನಡೆಯಲಿರುವ ಹಾಕಿ ಸರಣಿಗೆ ಅವರು ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಕೊಂಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಯುವತಿಯೊಬ್ಬಳು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ವರುಣ್‌ ವಿರುದ್ಧ ಬೆಂಗಳೂರು ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣ ರದ್ದಾದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಮರಳಿದ್ದಾರೆ. ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವ ವಹಿಸಲಿರುವ ತಂಡದಲ್ಲಿ ಕರ್ನಾಟಕದ ಮೊಹಮದ್‌ ರಾಹೀಲ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

11ನೇ ಆವೃತ್ತಿ ಪ್ರೊ ಕಬಡ್ಡಿ: ಬೆಂಗ್ಳೂರು ಬುಲ್ಸ್‌ಗೆ ಸತತ 2ನೇ ಸೋಲು!

ತನಿಶಾ ಕಶ್ಯಪ್‌ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌

ಬೆಂಗಳೂರು: ಬೆಂಗಳೂರು ಓಪನ್‌ ಎಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಭಾರತ ತನಿಶಾ ಕಶ್ಯಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಹಿರಿಯರ ವಿಭಾಗದಲ್ಲಿ ಪ್ರಶಸ್ತಿ ಬರ ನೀಗಿಸಿದರು.

ಭಾನುವಾರ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯಲ್ಲಿ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ 22 ವರ್ಷ ತನಿಶಾ ಅವರು ಆಕಾಂಕ್ಷಾ ವಿರುದ್ಧ 6-7(5/7), 6-1, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ ಕಳೆದುಕೊಂಡ ಹೊರತಾಗಿಯೂ ಬಳಿಕ 2 ಸೆಟ್‌ಗಳಲ್ಲಿ ತನಿಶಾ ಅಭೂತಪೂರ್ವ ಪ್ರದರ್ಶನ ನೀಡಿದರು. ಪಂದ್ಯ 2 ಗಂಟೆ, 19 ನಿಮಿಷ ಕಾಲ ನಡೆಯಿತು.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಯಾರಿಗೆಲ್ಲಾ ಗೇಟ್ ಪಾಸ್ ಕೊಡುತ್ತೆ?

ಆಕಾಂಕ್ಷಾ ಮಹಿಳಾ ಡಬಲ್ಸ್‌ನಲ್ಲೂ ಪ್ರಶಸ್ತಿ ತಪ್ಪಿಸಿಕೊಂಡರು. ಹುಮೇರಾ ಬಹಾರ್‌ಮಸ್‌ ಹಾಗೂ ಪೂಜಾ ಜೋಡಿ ಭಾನುವಾರ ನಡೆದ ಫೈನಲ್‌ನಲ್ಲಿ ಆಕಾಂಕ್ಷಾ-ಕರ್ನಾಟಕದ ಸೋಹಾ ಸಾದಿಕ್‌ ವಿರುದ್ಧ 6-3, 0-6, 6-10 ಅಂತರದಲ್ಲಿ ಜಯಭೇರಿ ಮೊಳಗಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು.