ಆಸೀಸ್ ಹಾಕಿ ಸರಣಿ: ಭಾರತ ಮಹಿಳಾ ತಂಡಕ್ಕೆ ಸವಿತಾ ಪೂನಿಯಾ ನಾಯಕಿ
ಏಷ್ಯನ್ ಗೇಮ್ಸ್ ಸಿದ್ದತೆಗಾಗಿ ಆಸೀಸ್ ಪ್ರವಾಸ ಮಾಡಲಿರುವ ಭಾರತ ಮಹಿಳಾ ಹಾಕಿ ತಂಡ
ಮೇ 18ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಸರಣಿ
ಮೇ 18, 20 ಹಾಗೂ 21ಕ್ಕೆ ಆಸ್ಪ್ರೇಲಿಯಾ ವಿರುದ್ಧ ಸವಿತಾ ಪಡೆ ಕಾದಾಟ
ನವದೆಹಲಿ(ಮೇ.09): ಏಷ್ಯನ್ ಗೇಮ್ಸ್‌ನ ಸಿದ್ಧತೆಗಾಗಿ ಮೇ 18ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಗೆ 20 ಮಂದಿಯ ಭಾರತ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದ್ದು, ಸವಿತಾ ಪೂನಿಯಾ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಭಾರತ, ಆಸ್ಪ್ರೇಲಿಯಾ ‘ಎ’ ತಂಡದ ವಿರುದ್ಧವೂ 2 ಪಂದ್ಯಗಳನ್ನಾಡಲಿದ್ದು, ದೀಪ್ ಗ್ರೇಸ್ ಉಪನಾಯಕತ್ವ ವಹಿಸಲಿದ್ದಾರೆ. ಮೇ 18, 20 ಹಾಗೂ 21ಕ್ಕೆ ಆಸ್ಪ್ರೇಲಿಯಾ ವಿರುದ್ಧ, ಮೇ 25 ಹಾಗೂ 27ಕ್ಕೆ ಆಸ್ಪ್ರೇಲಿಯಾ ‘ಎ’ ತಂಡದ ವಿರುದ್ಧ ಸವಿತಾ ಬಳಗ ಕಣಕ್ಕಿಳಿಯಲಿದೆ.
ಭಾರತ ಮಹಿಳಾ ಹಾಕಿ ತಂಡ ಹೀಗಿದೆ:
ಸವಿತಾ ಪೂನಿಯಾ(ನಾಯಕಿ), ಬಿಚು ದೇವಿ ಖಾರಿಬನ್, ದೀಪ್ ಗ್ರೇಸ್ ಎಕ್ಕಾ(ಉಪ ನಾಯಕಿ), ನಿಕ್ಕಿ ಪ್ರಧಾನ್, ಇಸಾಯಿಕ ಚೌಧರಿ, ಉದಿತಾ, ಗುರ್ಜಿತ್ ಕೌರ್, ನಿಶ್ರಾ, ನವಜೋತ್ ಕೌರ್, ಮೋನಿಕಾ, ಸಾಲಿಮಾ ತೆಟೆ, ನೇಹಾ, ನವನೀತ್ ಕೌರ್, ಸೋನಿಕಾ, ಜ್ಯೋತಿ, ಬಲ್ಜೀತ್ ಕೌರ್, ಲಾಲ್‌ರೇಶ್ಮಿ, ವಂದನಾ ಕಟಾರಿಯಾ, ಸಂಗೀತಾ ಕುಮಾರಿ, ಶರ್ಮಿಳಾ ದೇವಿ.
ವಿಶ್ವ ಬಾಕ್ಸಿಂಗ್: ಸಚಿನ್ ಪ್ರಿ ಕ್ವಾರ್ಟರ್ ಪ್ರವೇಶ
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಬಾಕ್ಸರ್ ಸಚಿನ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ 54 ಕೆ.ಜಿ. ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ 2021ರ ವಿಶ್ವ ಯುವ ಚಾಂಪಿಯನ್ಶಿಪ್ ವಿಜೇತ ಸಚಿನ್ ಮೊಲ್ಡೋವಾದ ನೊವಾಕ್ ಸರ್‌ಗೀ ವಿರುದ್ಧ 5-0 ಅಂತರದಲ್ಲಿ ಗೆದ್ದು ಅಂತಿಮ 16ರ ಘಟ್ಟತಲುಪಿದರು. ಆದರೆ 92 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್ನಲ್ಲಿ ನವೀನ್ ಸ್ಪೇನ್‌ನ ಎಮ್ಯಾನುಯೆಲ್ ರಿಯೆಸ್ ವಿರುದ್ಧ 0-5 ಅಂತರದಲ್ಲಿ ಸೋಲನುಭವಿಸಿದರು.
Wrestlers Protest ಕುಸ್ತಿಪಟುಗಳ ಹೋರಾಟಕ್ಕೆ ಮತ್ತೊಂದು ಟ್ವಿಸ್ಟ್: ಈಗ ರೈತರ ಸಾಥ್!
48 ಕೆ.ಜಿ. ವಿಭಾಗದಲ್ಲಿ ಗೋವಿಂದ್ ಸಹಾನಿ ಕೂಡಾ ಜಾರ್ಜಿಯಾದ ಸಖಿಲ್ ವಿರುದ್ಧ 0-5ರಲ್ಲಿ ಸೋತು ಹೊರಬಿದ್ದರು. ಮಂಗಳವಾರ 51 ಕೆ.ಜಿ. ವಿಭಾದಲ್ಲಿ ದೀಪಕ್, 54 ಕೆ.ಜಿ. ವಿಭಾಗದಲ್ಲಿ ಸಚಿನ್, 67 ಕೆ.ಜಿ. ವಿಭಾಗದಲ್ಲಿ ಆಕಾಶ್ ಪ್ರಿ ಕ್ವಾರ್ಟರ್ನಲ್ಲಿ ಸೆಣಸಲಿದ್ದಾರೆ.
ವೇಟ್ಲಿಫ್ಟಿಂಗ್: ಅಜಿತ್ಗೆ 9ನೇ ಸ್ಥಾನ
ಜಿಂಜು(ಕೊರಿಯಾ): ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಸೋಮವಾರ ಪುರುಷರ 73 ಕೆ.ಜಿ. ವಿಭಾಗದಲ್ಲಿ ಭಾರತದ ಯುವ ಅಥ್ಲೀಟ್, ರಾಷ್ಟ್ರೀಯ ಚಾಂಪಿಯನ್ ಅಜಿತ್ ನಾರಾಯಣ 9ನೇ ಸ್ಥಾನ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತ ಅಚಿಂತ ಶೆಹುಲಿ 10ನೇ ಸ್ಥಾನ ಪಡೆದರು.
ಅಜಿತ್ ಒಟ್ಟು 307 ಕೆ.ಜಿ.(ಸ್ನಾ್ಯಚ್ನಲ್ಲಿ 139 ಕೆ.ಜಿ. ಮತ್ತು ಕ್ಲೀನ್ ಆಂಡ್ ಜರ್ಕ್ನಲ್ಲಿ 168 ಕೆ.ಜಿ.) ಭಾರ ಎತ್ತಿ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದರೆ, ಶೆಹುಲಿ 305 ಕೆ.ಜಿ.(ಸ್ನಾ್ಯಚ್ನಲ್ಲಿ 140 ಕೆ.ಜಿ. ಮತ್ತು ಕ್ಲೀನ್ ಆಂಡ್ ಜರ್ಕ್ನಲ್ಲಿ 165 ಕೆ.ಜಿ.) ತೂಕ ಎತ್ತಿ 2ನೇ ಸ್ಥಾನಿಯಾದರು. ಆದರೆ ‘ಎ’ ಗುಂಪಿನ ಸ್ಪರ್ಧೆಗಳ ಬಳಿಕ ಇವರಿಬ್ಬರು ಕ್ರಮವಾಗಿ 9, 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.