Wrestlers Protest ಕುಸ್ತಿಪಟುಗಳ ಹೋರಾಟಕ್ಕೆ ಮತ್ತೊಂದು ಟ್ವಿಸ್ಟ್‌: ಈಗ ರೈತರ ಸಾಥ್‌!

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ದ ಕುಸ್ತಿಪಟುಗಳ ಪ್ರತಿಭಟನೆ
ರಾಜಕೀಯ ಪಕ್ಷಗಳ ಬಳಿಕ ರೈತರ ಬೆಂಬಲ
ಪಂಜಾಬ್‌, ಹರ್ಯಾಣದಿಂದ ರೈತರ ದಂಡು
 

Farmers Break Through Barricades To Join Wrestlers Delhi Protest at Jantar Mantar kvn

ನವ​ದೆ​ಹ​ಲಿ(ಮೇ.09): ಲೈಂಗಿಕ ಕಿರುಕುಳ ಸೇರಿ ಅನೇಕ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ತಲೆದಂಡ ಹಾಗೂ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಹೊಸ ತಿರುವು ದೊರೆತಿದೆ. ಕುಸ್ತಿಪಟುಗಳ ಪ್ರತಿಭಟನೆಗೆ ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೆಂಬಲದ ಬೆನ್ನಲ್ಲೇ ಇದೀಗ ಹಲವು ರಾಜ್ಯಗಳ ರೈತರೂ ಕೈಜೋಡಿಸಿದ್ದಾರೆ.

ಕುಸ್ತಿಪಟುಗಳ ಕೋರಿಕೆ ಹಿನ್ನೆಲೆಯಲ್ಲಿ ಪಂಜಾಬ್‌, ಹರ್ಯಾಣ, ಉತ್ತ​ರ​ಪ್ರ​ದೇಶ ಸೇರಿ​ದಂತೆ ವಿವಿಧ ಕಡೆ​ಗ​ಳಿಂದ ಸಂಯುಕ್ತ ಕಿಸಾನ್‌ ಮೋರ್ಚಾದ ನೂರಾರು ರೈತರು ಸೋಮ​ವಾರ ದೆಹಲಿಗೆ ಆಗ​ಮಿ​ಸಿ​ದ್ದಾರೆ. ಆದರೆ ಜಂತ​ರ್‌​ಮಂತ​ರ್‌ಗೆ ಮೆರ​ವ​ಣಿಗೆ ಮೂಲಕ ಸಾಗು​ತ್ತಿ​ದ್ದಾ​ಗ ಪೊಲೀ​ಸರು ಬ್ಯಾರಿ​ಕೇ​ಡ್‌ ಅಳ​ವ​ಡಿಸಿ ಅವ​ರನ್ನು ತಡೆ​ದಿ​ದ್ದಾರೆ. ಇದನ್ನು ಲೆಕ್ಕಿ​ಸದ ರೈತರು ಬ್ಯಾರಿ​ಕೇ​ಡ್‌​ಗ​ಳನ್ನು ಕಿತ್ತೆ​ಸೆದು ಪ್ರತಿ​ಭ​ಟ​ನಾ ಸ್ಥಳಕ್ಕೆ ಆಗ​ಮಿ​ಸಿ​ದ್ದು, ಕುಸ್ತಿ​ಪ​ಟು​ಗ​ಳಿಗೆ ನ್ಯಾಯ ಸಿಗು​ವ​ವ​ರೆಗೂ ಹೋರಾ​ಟ​ದಲ್ಲಿ ಪಾಲ್ಗೊ​ಳ್ಳು​ವು​ದಾಗಿ ತಿಳಿ​ಸಿ​ದ್ದಾರೆ.

ಹೋರಾಟ ಹೈಜಾಕ್‌ ಆಗಿ​ಲ್ಲ​:

ಪ್ರತಿ​ಭ​ಟ​ನೆಗೆ ವಿವಿಧ ಕಡೆ​ಗ​ಳಿಂದ ಬೆಂಬಲ ವ್ಯಕ್ತ​ವಾ​ಗು​ತ್ತಿರುವ ಹಿನ್ನೆ​ಲೆ​ಯಲ್ಲಿ ಪ್ರತಿ​ಕ್ರಿ​ಯಿ​ಸಿ​ರುವ ಭಜ​ರಂಗ್‌, ಪ್ರತಿ​ಭ​ಟ​ನೆ​ಯನ್ನು ಯಾರೂ ಹೈಜಾಕ್‌ ಮಾಡಿಲ್ಲ ಎಂದು ಸ್ಪಷ್ಟ​ಪ​ಡಿ​ಸಿದ್ದಾರೆ. ‘ನಾವು ರಾಜ​ಕೀಯ ಮಾಡಲು ಬಂದಿಲ್ಲ. ನಮಗೆ ನ್ಯಾಯ ಸಿಗ​ಬೇಕು. ನಮ್ಮ ಹೋರಾ​ಟ​ಕ್ಕೆ ಯಾರು ಬೇಕಾ​ದರೂ ಬೆಂಬ​ಲಿ​ಸ​ಬ​ಹುದು. ನಾವು ದೇಶ​ಕ್ಕಾಗಿ ಹೋರಾ​ಡು​ತ್ತಿ​ದ್ದೇವೆ. ಇದು ಕುಸ್ತಿ​ಪ​ಟು​ಗ​ಳಿಗೆ ಸೀಮಿ​ತ​ವಾ​ಗಿ​ಲ್ಲ’ ಎಂದು ತಿಳಿ​ಸಿ​ದ್ದಾರೆ.

Wrestlers Protest ಒಂದೇ ಒಂದು ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್‌ಭೂಷಣ್ ಸವಾಲು!

ಕುಸ್ತಿಪಟುಗಳು ಹಾಗೂ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ನಡುವಿನ ಹಗ್ಗಜಗ್ಗಾಟ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಸವಾಲು-ಪ್ರತಿಸವಾಲು ಮುಂದುವರಿಯುತ್ತಿದ್ದು, ಇದೀಗ ಭೂಷಣ್‌ ವಿಡಿಯೋ ಸಂದೇಶವೊಂದರ ಮೂಲಕ ಮತ್ತೊಂದು ಸವಾಲು ಹಾಕಿದ್ದಾರೆ. ಭಾನುವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಭೂಷಣ್‌, ‘ಪ್ರತಿಭಟನಾ ನಿರತ ಕುಸ್ತಿಪಟುಗಳು ತಾವು ಮಾಡಿರುವ ಆರೋಪಗಳ ಪೈಕಿ ಒಂದೇ ಒಂದು ಆರೋಪವನ್ನು ಸಾಬೀತು ಮಾಡಲಿ ಸಾಕು. ನಾನು ನೇಣು ಬಿಗಿದುಕೊಳ್ಳುತ್ತೇನೆ’ ಎಂದಿದ್ದಾರೆ.

ಬ್ರಿಜ್‌ ಬಂಧನಕ್ಕೆ ಮೇ 21ರ ಗಡುವು ಕೊಟ್ಟಕುಸ್ತಿಪಟುಗಳು!

ಬ್ರಿಜ್‌ಭೂಷಣ್‌ರನ್ನು ಮೇ 21ರೊಳಗೆ ಬಂಧಿಸದಿದ್ದರೆ ಪ್ರತಿಭಟನೆಯು ಉಗ್ರರೂಪ ಪಡೆಯಲಿದೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದಾರೆ. ಮುಂದಿನ ನಡೆ ಬಗ್ಗೆ ನಿರ್ಧರಿಸಲು ರಚಿಸಿದ್ದ 31 ಸದಸ್ಯರ ಸಮಿತಿಯ ಸಲಹೆಯ ಮೇರೆಗೆ ಕುಸ್ತಿಪಟುಗಳು ಈ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಕುಸ್ತಿಪಟುಗಳಿಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಬೆಂಬಲ ದೊರೆಯುತ್ತಿದ್ದು, ಭಾನುವಾರ 2000ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಯುತ್ತಿರುವ ಜಂತರ್‌-ಮಂತರ್‌ಗೆ ಭೇಟಿ ನೀಡಿದರು. ರೈತ ಮುಖಂಡ ರಾಕೇಶ್‌ ಟಿಕಾಯತ್‌ ಸೇರಿ ಹಲವರು ಪ್ರಮುಖರು ಭೇಟಿ ನೀಡಿ ಬ್ರಿಜ್‌ಭೂಷಣ್‌ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿನೇಶ್‌ ಫೋಗಾಟ್‌, ‘ಪ್ರತಿಭಟನೆಯನ್ನು ಯಾರೂ ಹೈಜ್ಯಾಕ್‌ ಮಾಡಿಲ್ಲ’ ಎಂದಿದ್ದಾರೆ.

Latest Videos
Follow Us:
Download App:
  • android
  • ios